ಪ್ರತೀ ವರ್ಷ ವಿಮೆಗ್ಯಾಕೆ ದುಡ್ಡು ಕಟ್ಟಬೇಕು ಅನ್ನುವ ಉಡಾಫೆ ಮಂದಿಯೇ ಹೆಚ್ಚು ನಮ್ಮಲ್ಲಿ. ಅದರಿಂದ ಅನುಕೂಲಗಳ ಬಗ್ಗೆ ದಡ್ಡರಿಗೆ ಅರಿವೆಯೇ ಇರುವುದಿಲ್ಲ – raichur police
ರಾಯಚೂರು : ಟ್ರಾಫಿಕ್ ಪೊಲೀಸ್ ಅಡ್ಡ ಹಾಕಿದ್ರೆ ಸಾಕು, ಲೈಸೆನ್ಸ್ ಎಲ್ಲಿ, ಆರ್.ಸಿ. ಕೊಡು, ಎಮಿಷನ್ ಮಾಡಿಸಿಲ್ವ, ಇನ್ಸೂರೆನ್ಸ್ ಕಾಪಿ ಎಲ್ಲಿ ಅನ್ನುತ್ತಾರೆ. ಯಾವುದಾದರೊಂದು ದಾಖಲೆ ಇಲ್ಲ ಅಂದ್ರೆ ದಂಡ ಗ್ಯಾರಂಟಿ. ಹಾಗಂತ ಪೊಲೀಸರ ತಪ್ಪೇನಿಲ್ಲ. ವಾಹನ ಓಡಿಸುವ ಸಂದರ್ಭದಲ್ಲಿ ಈ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ಅದರಲ್ಲೂ ವಾಹನಕ್ಕೆ ಇನ್ಸೂರೆನ್ಸ್ ಮಾಡಿಸಿಕೊಳ್ಳುವುದು ಕಡ್ಡಾಯ. ( raichur police ) ಯಾವ ಕ್ಷಣದಲ್ಲಿ ಏನೂ ಬೇಕಾದರೂ ಸಂಭವಿಸಬಹುದು. ಹಾಗಾಗಿ ಇನ್ಸೂರೆನ್ಸ್ ಬೇಕೇ ಬೇಕು.
ಹಾಗಂತ ಅದೆಷ್ಟು ಮಂದಿ ಇನ್ಸೂರೆನ್ಸ್ ಮಾಡಿಸಿಕೊಂಡಿದ್ದಾರೆ ಹೇಳಿ. ಕಳೆದ ವರ್ಷ ಇನ್ಸೂರೆನ್ಸ್ ಕಟ್ಟಿದ್ದೇವೆ, ಕೈಯಿಂದ ಕಾಸು ಹೋಯ್ತು ಬಿಟ್ರೆ ಮತ್ತೇನೂ ಆಗಿಲ್ಲ ಅನ್ನುವ ಉಡಾಫೆ ಮಾತು ಆಡುವವರೇ ಹೆಚ್ಚು. ಯಾಕಂದ್ರೆ ಅವರಿಗೆ ಇನ್ಸೂರೆನ್ಸ್ ಬಗ್ಗೆ ಮಾಹಿತಿಯೇ ಇರುವುದಿಲ್ಲ.
ಇದನ್ನೂ ಓದಿ : ಪತ್ನಿಯ ರುಂಡದೊಂದಿಗೆ ಪೊಲೀಸ್ ಸ್ಟೇಷನ್ ಗೆ ಬಂದ ಗಂಡ – ಶೀಲ ಶಂಕಿಸಿ ಕೊಲೆ
ಇಂತಹ ಉಡಾಫೆ ಶೂರರಿಗೆ ಪಾಠ ಕಲಿಸಲು ಮುಂದಾಗಿರುವ ರಾಯಚೂರು ಪೊಲೀಸರು ವಿಶಿಷ್ಟ ಇನ್ಸೂರೆನ್ಸ್ ಡ್ರೈವ್ ಒಂದನ್ನು ಪ್ರಾರಂಭಿಸಿದ್ದಾರೆ. ತಪಾಸಣೆ ಸಲುವಾಗಿ ವಾಹನಗಳನ್ನು ಹಿಡಿದಾಗ ಇನ್ಸೂರೆನ್ಸ್ ಇಲ್ಲ ಅನ್ನುವುದು ಗೊತ್ತಾದ್ರೆ ಸ್ಥಳದಲ್ಲೇ ಇನ್ಸೂರೆನ್ಸ್ ಮಾಡಿಸಲಾಗುತ್ತದೆ. ದಂಡದ ಹಣದಲ್ಲೇ ಇನ್ಸೂರೆನ್ಸ್ ಮೊತ್ತವನ್ನು ಪಾವತಿಸಲಾಗುತ್ತದೆ.
ಹಾಗಂತ ಈ ಡ್ರೈವ್ ವಾರಪೂರ್ತಿ ತಿಂಗಳು ಪೂರ್ತಿ ನಡೆಯೋದಿಲ್ಲ. ಈಗಾಗಲೇ ಒಂದೆರೆಡು ದಿನ ಡ್ರೈವ್ ನಡೆಸಲಾಗಿದ್ದು, ಜನರಲ್ಲಿ ಇನ್ಸೂರೆನ್ಸ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಸಾವಿರ ದಂಡ ಕಟ್ಟುವ ಬದಲು ಸಾವಿರ ರೂಪಾಯಿಯಲ್ಲೇ ಇನ್ಸೂರೆನ್ಸ್ ಮಾಡಿಸಿ ಎಂದು ಸವಾರರಿಗೆ ಹೇಳಿದ್ದೇವೆ. ಹೀಗಾಗಿ ಇನ್ನು ಮುಂದೆ ಇನ್ಸೂರೆನ್ಸ್ ಇಲ್ಲ ಅಂದ್ರೆ ದಂಡ ಹಾಕುತ್ತೇವೆ ಅಂತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಹೇಳಿದ್ದಾರೆ.
ಕಳ್ಳ ಪತಿ : ಪತ್ನಿ ಅತ್ತೆಯಿಂದ ಮಾಲು ವಿಲೇವಾರಿ : ಕಳ್ಳರ ಕುಟುಂಬ
ಇಡೀ ಕುಟುಂಬದ ಉದ್ಯೋಗ ಕಳ್ಳತನವಾಗಿತ್ತು, ಕದ್ದ ಮಾಲುಗಳನ್ನು ಖರೀದಿಸಲು ಚಿನ್ನದಂಗಡಿ ಮಾಲೀಕರನ್ನೂ ಫಿಕ್ಸ್ ಮಾಡಲಾಗಿತ್ತು
ಬೆಂಗಳೂರು : ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಳುವು ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿ ಅಂದ್ರೆ ಈ ಗ್ಯಾಂಗ್ ನ ಸದಸ್ಯರು ಒಂದೇ ಕುಟುಂಬದವರು. ಪತಿ ಪತ್ನಿ ಮತ್ತು ಅತ್ತೆಯೇ ಕಳ್ಳತನ ಕೃತ್ಯದಲ್ಲಿ ಪಾಲುದಾರರಾಗಿದ್ದರು.ಕದ್ದ ಚಿನ್ನ ಎಂದು ಗೊತ್ತಿದ್ದರೂ ಖರೀದಿ ಮಾಡುತ್ತಿದ್ದ ಜ್ಯುವೆಲ್ಲರಿ ಮಾಲೀಕರನ್ನೂ ಬಂಧಿಸಿಲಾಗಿದೆ.
ಬಂಧಿತರನ್ನು ಕೆಜಿ ಹಳ್ಳಿಯ ಬಾಗಲೂರು Lay out ನ ಜಾನ್ ಪ್ರವೀಣ್ ಆಲಿಯಾಸ್ ಮೂಗು ಮಚ್ಚೆ (32) ಈತನ ಪತ್ನಿ ಆನಂದಿ (19) ಅತ್ತೆ ಧನಲಕ್ಷ್ಮಿ (36) ಹಾಗೂ ಚಿನ್ನ ಖರೀದಿ ಮಾಡುತ್ತಿದ್ದ ಪಿಳ್ಳಣ್ಣ ಗಾರ್ಡನ್ ಭವರ್ ಲಾಲ್ (48) ಮತ್ತು ಚೇತನ್ ಚೌಧರಿ (29) ಎಂದು ಗುರುತಿಸಲಾಗಿದೆ. ಬಂಧಿತರಿಂದ 17.35 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀಗ ಹಾಕಿದ ಮನೆಗಳನ್ನು ಗುರುತಿಸಿದ ಬಳಿಕ ಪ್ರವೀಣ್ ಮನೆಗೆ ನುಗ್ಗಿ ಚಿನ್ನಾಭರಣ ದೋಚಿಕೊಂಡು ಬರುತ್ತಿದ್ದ ಬಳಿಕ ಆನಂದಿ ಮತ್ತು ಧನಲಕ್ಷ್ಮಿ ಚಿನ್ನಾಭರಣಗಳನ್ನು ಭವರ್ ಲಾಲ್ ಮತ್ತು ಚೇತನ್ ಗೆ ಮಾರಾಟ ಮಾಡುತ್ತಿದ್ದರು.ಅಂಗಡಿಗೆ ಹೋಗಿ ಮಾರಾಟ ಮಾಡಿದರೆ ಸಿಸಿಟಿವಿಯಲ್ಲಿ ಸಾಕ್ಷಿ ಸಿಗುತ್ತದೆ ಅನ್ನುವ ಕಾರಣದಿಂದ ತಾವಿದ್ದ ಜಾಗಕ್ಕೆ ಚಿನ್ನದ ವ್ಯಾಪಾರಿಗಳನ್ನು ಕರೆಸಿ ವ್ಯವಹಾರ ಕುದುರಿಸುತ್ತಿದ್ದರು. ಕಳ್ಳ ಮಾಲು ಖರೀದಿಸಿದ ಕರ್ಮಕ್ಕಾಗಿ ಇದೀಗ ವ್ಯಾಪಾರಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
Discussion about this post