ಮಂಗಳೂರು : ಕರಾವಳಿಯ ಪೊಲೀಸ್ ಠಾಣೆಗಳಿಗೆ ಗೃಹ ಸಚಿವರು ಬಿಸಿ ಮುಟ್ಟಿಸದೇ ಹೋದರೆ ಕಳ್ಳರ ಕಾಟದಿಂದ ಕರಾವಳಿ ಜನ ಕಂಗಲಾಗುವುದು ಗ್ಯಾರಂಟಿ.
ಕರಾವಳಿಯಲ್ಲಿ ನಡೆದ ಅನೇಕ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ನಡುವೆ ನಿತ್ಯ ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೆ ಇದೆ.
ದುರಂತ ಅಂದ್ರೆ ಪೊಲೀಸ್ ಠಾಣೆಯ ಪಕ್ಕದಲ್ಲೇ ಕಳ್ಳತನ ಕೃತ್ಯಗಳು ನಡೆಯುತ್ತಿದೆ ಅಂದ್ರೆ ಪೊಲೀಸರ ಬಗ್ಗೆ ಕಳ್ಳರಿಗೆ ಅದೆಷ್ಟು ಭಯವಿರಬೇಕು.
ಪುತ್ತೂರಿನ ಪ್ರತಿಷ್ಠಿತ ಶ್ರೀಧರ್ ಭಟ್ ಬ್ರದರ್ಸ್ ಅಂಗಡಿಯ ಪಕ್ಕದಲ್ಲಿರುವ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಅಂಗಡಿಗೆ ಕಳ್ಳರು ನುಗ್ಗಿದ ಘಟನೆ ಮಾ.25 ರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಜ್ಯುವೆಲ್ಲರ್ಸ್ ಅಂಗಡಿಯ ರೋಲಿಂಗ್ ಶೆಟರ್ ತೆಗೆದು ಒಳಗಿನ ಸ್ಲೈಡ್ ಗೇಟ್ ನ ಬೀಗ ಒಡೆದ ಕಳ್ಳರು ಒಳ ನುಗ್ಗಿ ಚಿನ್ನಾಭರಣ, ಬೆಳ್ಳಿಯ ಸಾಮಾಗ್ರಿಯನ್ನು ಕಳವು ಮಾಡಿದ್ದಾರೆ.
ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಅಂಗಡಿಯ ಜೊತೆಗೆ ಕೋರ್ಟ್ ರಸ್ತೆಯಲ್ಲಿರುವ ಶ್ರೀನವಮಿ ಜ್ಯುವೆಲ್ಲರ್ಸ್, ಶೃತಿ ಜ್ಯುವೆಲ್ಲರ್ಸ್ ಹಾಗೂ ಹಿರಣ್ಯ ಕಟ್ಟಿಂಗ್ ಅಂಗಡಿಗೂ ನುಗ್ಗಿರುವ ಕಳ್ಳರು ಕೈ ಸಿಕ್ಕಿದ್ದನ್ನು ದೋಚಿದ್ದಾರೆ.
ಕಳ್ಳರು ಕೈ ಚಳಕ ತೋರಿದ ಕಟ್ಟಡಕ್ಕೂ ಪೊಲೀಸ್ ಠಾಣೆಗೂ ಅಬ್ಬಬ್ಬ ಅಂದ್ರೆ 50 ಮೀಟರ್ ಅಂತರವಿರಬಹುದು. ಠಾಣೆಯ ಪಕ್ಕದಲ್ಲೇ ಹೀಗಾಗಿದೆ ಅಂದ್ರೆ ಗ್ರಾಮೀಣ ಪ್ರದೇಶದ ಪರಿಸ್ಥಿತಿಯನ್ನು ಒಂದ್ಸಲ ಊಹಿಸಿ.
Discussion about this post