ಪೈಲ್ವಾನ್ ಚಿತ್ರ ಪೈರೆಸಿ ಕುರಿತಂತೆ ಸಿಸಿಬಿ ಪೊಲೀಸರು
ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ನೆಲಮಂಗಲ ನಿವಾಸಿ ರಾಕೇಶ್ ಎಂದು
ಗುರುತಿಸಲಾಗಿದೆ. ದಾಬಸ್ ಪೇಟೆಯಲ್ಲಿ ಈತನನ್ನು ಸಿಸಿಬಿಯ ಡಿಸಿಪಿ ರವಿಕುಮಾರ್ ನೇತೃತ್ವದ ತಂಡ
ಬಂಧಿಸಿದೆ.
ಬಂಧಿತ ರಾಕೇಶ್ ದರ್ಶನ್ ಅಭಿಮಾನಿ ಎಂದು ಹೇಳಲಾಗಿದೆ. ಆತನ ಫೇಸ್ ಬುಕ್ ಖಾತೆಯಲ್ಲಿ ದರ್ಶನ್ ಅವರ ಹಲವು ಫೋಟೋಗಳು ಅಪ್ ಲೋಡ್ ಆಗಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
ಹಾಗಂತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ದರ್ಶನ್ ಪೋಟೋ
ಹಾಕಿಕೊಂಡ ತಕ್ಷಣ ಅಭಿಮಾನಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದರ್ಶನ್ ಹೆಸರಿಗೆ ಕಳಂಕ ತರುವ
ನಿಟ್ಟಿನಲ್ಲಿ ಈ ಕೆಲಸ ಮಾಡಿರುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಹೀಗಾಗಿ ಸಿಸಿಬಿ
ಪೊಲೀಸರು ಕೂಡಾ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಪೈರೆಸಿ ವಿವಾದ ಚಂದನವನದಲ್ಲಿ ಸ್ಟಾರ್ ವಾರ್ ಗೂ ಕಾರಣವಾಗಿತ್ತು. ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕಿತ್ತಾಡಿಕೊಂಡಿದ್ದರು.
ಪೈಲ್ವಾನ್ ಪೈರೆಸಿಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ನಿರ್ಮಾಪಕಿ ಸ್ವಪ್ನಾ ಕೃಷ್ಣ ಸೇರಿ ಚಿತ್ರ ತಂಡ ಬೆಂಗಳೂರು ಪೊಲೀಸರಿಗೆ ದೂರು ಸಲ್ಲಿಸಿತ್ತು.
Discussion about this post