ರಾಜ್ಯದ ಅನೇಕ ಕಡೆಗಳಲ್ಲಿ Whitener and solution ದಂಧೆ ಎಗ್ಗಿಲ್ಲದೆ ಸಾಗಿದೆ. ಇದನ್ನು ತಡೆಯವು ಕೆಲಸವನ್ನು ಪೊಲೀಸರು ಮಾಡಬೇಕು. ಪಾಪ ಅವರಿಗೆಲ್ಲಿ ಟೈಮಿದೆ. ಖಾಕಿಗಳು ಅದೆಷ್ಟು ಬ್ಯುಸಿ ಅನ್ನುವುದು ಇತ್ತೀಚೆಗೆ ಟಿವಿಗಳಲ್ಲಿ ಬರ್ತಾನೆ ಇದೆ
ಬೆಂಗಳೂರು : ಹೆಸರಿಗೆ ಇದೊಂದು ಬುಕ್ ಸ್ಟಾಲ್, ಆದರೆ ಮಾಡುತ್ತಿದ್ದದ್ದು ಮಾತ್ರ ಸಮಾಜ ಘಾತುಕ ಕಾರ್ಯ. ಹೌದು ಬುಕ್ ಸ್ಟಾಲ್ ಹೆಸರಿನಲ್ಲಿ Whitener and solution ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಯಶವಂತಪುರದ ಲೋಕೇಶ್ (35) ಎಂದು ಗುರುತಿಸಲಾಗಿದೆ.
ರಾಬರಿ ಪ್ರಕರಣವೊಂದರಲ್ಲಿ ಸದಾಶಿವನಗರ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾಗ, ಈ ಸೆಲೂಷನ್ ಮಾರಾಟದ ವಿಚಾರ ಬೆಳಕಿಗೆ ಬಂದಿದೆ. ಅಪ್ರಾಪ್ತರಿಗೆ ಮತ್ತು ಬರಿಸೋ ಈ ನಿಧಾನ ವಿಷದ ಮಾರಾಟದ ಮಾಹಿತಿ ಸಿಗುತ್ತಿದ್ದಂತೆ ಯಶವಂತಪುರ RTO ಕಚೇರಿಯ ಬಳಿ ಇರುವ ಪುಟ್ಟಪ್ಪ ಬುಕ್ ಸ್ಟಾಲ್ ಗೆ ದಾಳಿ ಮಾಡಿದ್ದಾರೆ.
ಇದನ್ನೂ ಓದಿ : ಕಿಸಾನ್ ಸಮ್ಮಾನ್ ವೆಬ್ ಸೈಟ್ ಬಗ್ಗೆ ಕರವೇ ಕೆಂಗಣ್ಣು : ಹೋರಾಟದ ಎಚ್ಚರಿಕೆ ನೀಡಿದ ನಾರಾಯಣಗೌಡ
ಬಂಧಿತ ಆರೋಪಿ ಲೋಕೇಶ್ ದುಬಾರಿ ದರಕ್ಕೆ ಅಪ್ರಾಪ್ತರಿಗೆ ಸಲೂಷನ್ ಮಾರಾಟ ಮಾಡುತ್ತಿದ್ದ, ಈ ಮೂಲಕ ಅಕ್ರಮವಾಗಿ ಹಣ ಗಳಿಸುತ್ತಿರುವುದರ ಜೊತೆಗೆ ನಿಯಮ ಬಾಹಿರವಾಗಿ ಈ ವಸ್ತುವನ್ನು ಮಾರಾಟ ಮಾಡಿ ಅಕ್ರಮ ಕೆಲಸಗಳಿಗೆ ಸಾಥ್ ನೀಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಈ Whitener and solution ಅನ್ನುವುದು Slow poison. ಕಾಗದದ ಮೇಲಿನ ಅಕ್ಷರ ಅಳಿಸಲು ಬಳಸುವ ಈ ಸಾಧನ ಮನುಷ್ಯನ ನೆನಪಿನ ಶಕ್ತಿಯನ್ನೇ ಅಳಿಸುತ್ತದೆ. ಅಷ್ಟರ ಮಟ್ಟಿಗೆ ಇದು ವಿಷ ಅನ್ನುವುದು ಅನೇಕರಿಗೆ ಗೊತ್ತಿಲ್ಲ.
ಕಿಸಾನ್ ಸಮ್ಮಾನ್ ವೆಬ್ ಸೈಟ್ ಬಗ್ಗೆ ಕರವೇ ಕೆಂಗಣ್ಣು : ಹೋರಾಟದ ಎಚ್ಚರಿಕೆ ನೀಡಿದ ನಾರಾಯಣಗೌಡ
ಬೆಂಗಳೂರು : ಲಕ್ಷಾಂತರ ರೈತರಿಗೆ ಅನುಕೂಲವಾಗಿರುವ ಕಿಸಾನ್ ಸಮ್ಮಾನ್ ನಿಧಿ ( Kisan samman nidhi ) ಯೋಜನೆಯ ವಿರುದ್ಧ ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಕಿಡಿ ಕಾರಿದೆ. ಯೋಜನೆಯ ವೆಬ್ ಸೈಟ್ ನಲ್ಲಿ ಕನ್ನಡವನ್ನು ನಿರ್ಲಕ್ಷ್ಯ ಮಾಡಲಾಗಿದೆ ಅನ್ನುವುದು ಕರವೇ ಮುಖಂಡರ ಆಕ್ರೋಶ. pm kisan samman nidhi ವೆಬ್ ಸೈಟ್ ನಲ್ಲಿ ಹಿಂದಿ ಭಾಷೆ ಇದೆ, ಗುಜರಾತ್ ಭಾಷೆ ಇದೆ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಗಳಿದೆ. ಆದರೆ ಕನ್ನಡ ಮಾತ್ರ ಇಲ್ಲ ಅನ್ನುವ ಹಿನ್ನಲೆಯಲ್ಲಿ ಈ ಹೋರಾಟದ ಎಚ್ಚರಿಕೆ ನೀಡಲಾಗಿದೆ.
ಯೋಜನೆಯ ವೆಬ್ ಸೈಟ್ ನಲ್ಲಿ ಇಂಗ್ಲೀಷ್, ಅಸ್ಸಾಮಿ, ಗುಜರಾತಿ, ಮಲಯಾಳಂ, ಮರಾಠಿ, ತೆಲುಗು ಭಾಷೆಗಳನ್ನು ಮಾನ್ಯ ಮಾಡಲಾಗಿದೆ. ಆದರೆ ಕನ್ನಡಕ್ಕೆ ಮನ್ನಣೆ ನೀಡಲಾಗಿಲ್ಲ. ಹಾಗಾದ್ರೆ ಕನ್ನಡ ಬಾರದ ರೈತರು ಏನು ಮಾಡಬೇಕು. ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅನ್ನದಾತರಿದ್ದೂ, ಕನ್ನಡದ ಬಗ್ಗೆ ನಿರ್ಲಕ್ಷ್ಯ ಯಾಕೆ ಎಂದು ಪ್ರಶ್ನಿಸಿರುವ ಕರವೇ, ಭಾಷಾ ನೀತಿ ಕಡೆಗಣನೆಯನ್ನು ಖಂಡಿಸಿದೆ.
ಮಾಹಿತಿಗಳ ಪ್ರಕಾರ ಕೇರಳದಲ್ಲಿ 37 ಲಕ್ಷ ಫಲಾನುಭವಿಗಳು, ಅಸ್ಸಾಂನಲ್ಲಿ 31 ಲಕ್ಷ ಫಲಾನುಭವಿಗಳಿದ್ದು ಅಲ್ಲಿನ ಭಾಷೆಗಳಿಗೆ ಮನ್ನಣೆ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ 50 ಲಕ್ಷ ಫಲಾನುಭವಿಗಳಿದ್ದರೂ ಕನ್ನಡಕ್ಕೆ ವೆಬ್ ಸೈಟ್ ನಲ್ಲಿ ಜಾಗವಿಲ್ಲ. ಹೀಗಾಗಿ ತಕ್ಷಣ ವೆಬ್ ಸೈಟ್ ನಲ್ಲಿ ಯೋಜನೆಯ ಬಗ್ಗೆ ಕನ್ನಡದಲ್ಲೂ ಮಾಹಿತಿ ನೀಡುವಂತೆ ಆಗ್ರಹಿಸಿರುವ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ( TA Narayanagowda ) ತಪ್ಪಿದರೆ ಉಗ್ರ ಹೋರಾಟ ಉಂಟು ಅಂದಿದ್ದಾರೆ.
Discussion about this post