ಪಾನಿಪೂರಿ ಕಿಟ್ಟಿಯ ಸಂಬಂಧಿಯ ಮೇಲೆ ಹಲ್ಲೆ ಮತ್ತು ಕಿಡ್ನಾಪ್ ಆರೋಪ ಹೊತ್ತು ಜೈಲು ಸೇರಿರುವ ದುನಿಯಾ ವಿಜಿಗೆ ಪೊಲೀಸ್ ಠಾಣೆ, ಜೈಲು ಹೊಸದೇನಲ್ಲ. ಸೆಲೆಬ್ರೆಟಿ ಅನ್ನಿಸಿಕೊಂಡವರು ಏನೆಲ್ಲಾ ಮಾಡಬಾರದೋ ಅವೆಲ್ಲವನ್ನೂ ವಿಜಿ ಮಾಡಿದ್ದಾರೆ.
ಸೆಲೆಬ್ರೆಟಿ ಅನ್ನಿಸಿಕೊಂಡವರು ಸಮಾಜಕ್ಕೆ ಆದರ್ಶರಾಗಿರಬೇಕು ಅನ್ನುವುದು ವಿಜಿಗೆ ಅನ್ವಯಿಸುವುದಿಲ್ಲ. ವಿಜಿಯ ಒಂದಿಷ್ಟು ಇತಿಹಾಸ ಕೆದಕಿದರೆ ಸಾಲು ಸಾಲು ಪ್ರಕರಣ ಸಿಗುತ್ತದೆ. ನಮಗೆ ಸಿಕ್ಕಿದ ಒಂದಿಷ್ಟು ಮಾಹಿತಿಯನ್ನು ನಿಮ್ಮ ಮುಂದಿಟ್ಟಿದ್ದೇವೆ.
ಜನವರಿ 18 2013 ರಂದು ಪತ್ನಿ ನಾಗರತ್ನ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ವಿಜಿ ಸಂಬಂಧಿ ಶಿವಶಂಕರಗೌಡ ಎಂಬಾತನ ಮೇಲೆ ಹಲ್ಲೆಗೂ ಮುಂದಾಗಿದ್ದರು. ಈ ಎರಡೂ ಪ್ರಕರಣಗಳ ಸಂಬಂಧ ವಿಜಿ ವಿರುದ್ಧ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮೇ 31 2018 ರಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದ ಮೇರೆಗೆ ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಿಜಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ವಿಜಯ್ ಸಹಾಯ ಮಾಡಿದ್ದರು ಆನ್ನುವ ಆರೋಪವಿದೆ
ವೃದ್ಧ ವ್ಯಕ್ತಿಯೊಬ್ಬರ ಎದೆಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದರು. ಈ ಕುರಿತು ವೃದ್ಧ ವ್ಯಕ್ತಿ ವಿಜಿ ವಿರುದ್ಧ ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲೂ ವಿಜಿ ಬೇಲ್ ಪಡೆದು ಹೊರ ಬಂದಿದ್ದರು
Discussion about this post