ಮಂಗಳೂರು : ಮಹಾನಗರಪಾಲಿಕೆ ಹಾಕಿದ ಕ್ರಾಂಕ್ರೀಟ್ ರಸ್ತೆಯಲ್ಲಿ ಕಾರು ಓಡಿಸುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ರಥ ಬೀದಿಯಲ್ಲಿ ನಡೆದಿದೆ. ಈ ಕೊಲೆ ದೃಶ್ಯ ಅಪಾರ್ಟ್ ಮೆಂಟ್ ನ ಸಿಸಿಟಿವಿ ದಾಖಲಾಗಿದೆ.
ಕೊಲೆಯಾದವರನ್ನು ಕಾರ್ಸ್ಟ್ರೀಟ್ನ ಮಹಮ್ಮಾಯಿ ದೇವಸ್ಥಾನ ರಸ್ತೆಯಲ್ಲಿರುವ ವೀರ ವೆಂಕಟೇಶ್ ಅಪಾರ್ಟ್ ಮೆಂಟ್ ನಿವಾಸಿ ವಿನಾಯಕ ಕಾಮತ್ ಎಂದು ಗುರುತಿಸಲಾಗಿದೆ ಕಾಮತ್. ಕರಂಗಲ್ಪಾಡಿಯ ಟ್ರಾವೆಲ್ಸ್ ವೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೊಲೆಗಾರರನ್ನು ಇದೇ ಅಪಾರ್ಟ್ ಮೆಂಟ್ ನಿವಾಸಿಗಳಾದ ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ಕಿಣಿ ಎಂದು ಗೊತ್ತಾಗಿದ್ದು ಅವರಿಬ್ಬರನ್ನೂ ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ
ವಿನಾಯಕ ಕಾಮತ್ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ನ ಗೇಟಿನ ಮುಂದೆ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಕ್ರಾಂಕೀಟ್ ಹಾಕಿ ರಸ್ತೆ ನಿರ್ಮಿಸಲಾಗಿತ್ತು. ಇದರ ಮೇಲೆ ಕಾರು ಚಲಾಯಿಸಿಕೊಂಡು ಹೋಗುವ ಕುರಿತಂತೆ ವಿನಾಯಕ ಕಾಮತ್ ಹಾಗೂ ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ಕಿಣಿ ಕಿರಿಕ್ ಪ್ರಾರಂಭಿಸಿದ್ದರು. ಕಳೆದ 4 ದಿನಗಳಿಂದ ಇವರ ನಡುವೆ ಕಿತ್ತಾಟ ನಡೆಯುತ್ತಿತ್ತು.
ಈ ನಡುವೆ ಬುಧವಾರ ರಾತ್ರಿ 11ರ ಗಂಟೆಯ ಹೊತ್ತಿಗೆ ಪಟಾಕಿ ಹೊಡೆಯುವ ವಿಚಾರದಲ್ಲಿ ಇವರ ನಡುವೆ ಮತ್ತೆ ಕಿತ್ತಾಟ ಪ್ರಾರಂಭವಾಗಿದೆ. ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ಜಗಳ ಪ್ರಾರಂಭವಾಗಿತ್ತು, ಈ ವೇಳೆ ಕೃಷ್ಣಾನಂದ ವಿನಾಯಕ ಕಾಮತ್ ಗೆ ಚೂರಿಯಿಂದ ಇರಿದಿದ್ದಾನೆ ಈ ವೇಳೆ ವಿನಾಯಕ ಕಾಮತ್ ತೀವ್ರ ರಕ್ತಸ್ರಾವದಿಂದ ಬಳಲಿದ್ದು ಅಪಾಟ್೯ಮೆಂಟ್ನ ಇತರರ ಸಹಾಯದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಕಾಮತ್ ತಡರಾತ್ರಿ ಮೃತಪಟ್ಟಿದ್ದಾರೆ.
ಈ ನಡುವೆ ವಿನಾಯಕ ಕಾಮತ್ ಪತ್ನಿ ಅಮಣಿ ಕಾಮತ್ ನೀಡಿದ ದೂರಿನ ಆಧಾರದಲ್ಲಿ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Discussion about this post