ಕೋಲಾರ : ಎಂಬಿ ರಸ್ತೆಯಲ್ಲಿರುವ ಬೆಸ್ಕಾಂ ಇಲಾಖೆಗೆ ಸೇರಿದ ಪವರ್ ಸ್ಟೇಷನ್ನಲ್ಲಿ ಟ್ರಾನ್ಸ್ ಫಾರ್ಮರ್ ಸ್ಟೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ. ಶನಿವಾರ ಮದ್ಯಾಹ್ನ 2,15 ಕ್ಕೆ ಈ ದುರ್ಘಟನೆ ಸಂಭವಿಸಿದೆ.
ಸ್ಪೋಟ ಸಂಭವಿಸಿದ್ದ ಬೆನ್ನಲ್ಲೇ ಟ್ಯಾಂಕ್ನಲ್ಲಿದ್ದ ಆಯಿಲ್ ಸೋರಿಕೆಯಾದ ಪರಿಣಾಮ ಬೆಂಕಿಯ ತೀವ್ರತೆ ಏರಿದೆ. ಕ್ಷಣದಿಂದ ಕ್ಷಣಕ್ಕೆ ಆಯಿಲ್ ಸೋರಿಕೆ ಪ್ರಮಾಣ ಹೆಚ್ಚಾದ ಕಾರಣ ಬೆಂಕಿಯ ಕೆನ್ನಾಲಿಗೆ ಸುತ್ತ ಮುತ್ತಲಿನ ಪ್ರದೇಶದ ಜನರ ಆತಂಕಕ್ಕೆ ಕಾರಣವಾಯ್ತು.
ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿ ಶಾಮಕ ದಳ ಸಿಬ್ಬಂದಿ, ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನ ಹತೋಟಿಗೆ ತಂದರು. ಈ ವೇಳೆ ಐದು ಅಗ್ನಿಶಾಮಕ ವಾಹನಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು.
220 ಕೆವಿ ಸಾಮರ್ಥ್ಯದ ಪವರ್ ಸ್ಟೇಷನ್ ಇದಾಗಿದ್ದು, 100 ಎಮ್ಎ ಟ್ರಾನ್ಸ್ ಪಾರ್ಮ್ನಲ್ಲಿದ್ದ 1 ಲಕ್ಷ ಲೀಟರ್ ಆಯಿಲ್ ಶೇಖರಿಸುವ ಸಾಮರ್ಥ್ಯ ಹೊಂದಿದೆ.
Discussion about this post