ಉಮೇಶ್ ರೆಡ್ಡಿ ಇಂದಿಗೂ ಈ ಹೆಸರು ಕೇಳಿದರೆ ಪೊಲೀಸರು ಬೆಚ್ಚಿ ಬೀಳುತ್ತಾರೆ. ಅದರಲ್ಲೂ ಮಹಾ ಕ್ರಿಮಿನಲ್ ಗಳ ಹೆಡೆ ಮುರಿ ಕಟ್ಟಿದ ಕರ್ನಾಟಕ ಪೊಲೀಸರ ಪಾಲಿಗೆ ಈ ಉಮೇಶ್ ರೆಡ್ಡಿಯನ್ನು ಸೆರೆಮನೆಗೆ ತಳ್ಳುವುದು ತಲೆನೋವಾಗಿತ್ತು. ಹೋಗ್ಲಿ ಬಂಧಿಸಿ ತಂದ್ರೆ ಮತ್ತೆ ತಪ್ಪಿಸಿಕೊಳ್ಳುತ್ತಿದ್ದ ತಪ್ಪಿಸಿಕೊಂಡವನು ಮತ್ತೆ ಅತ್ಯಾಚಾರಿ ಎಸಗಿ, ಸರಣಿ ಹತ್ಯೆ ಮಾಡುತ್ತಿದ್ದ. ಹೀಗೆ 6 ಸಲ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಉಮೇಶ್ ರೆಡ್ಡಿ ಮೇಲೆ 9 ಅತ್ಯಾಚಾರ ಪ್ರಕರಣಗಳು ಸಾಬೀತಾಗಿದೆ.
ಒಟ್ಟು 21 ಪ್ರಕರಣಗಳಲ್ಲಿ ವಿಚಾರಣೆ ಎದುರಿಸಿದ್ದ ಉಮೇಶ್ ರೆಡ್ಡಿ 11 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದ. ಹಿರಿಯೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿದೆ. ಅಂತೂ 23 ವರ್ಷಗಳ ಬಳಿಕ ನ್ಯಾಯ ಸಿಕ್ಕಿತಲ್ಲ ಅನ್ನುವುದು ನೆಮ್ಮದಿಯ ವಿಚಾರ.
ಒಂಟಿ ಮಹಿಳೆಯರು ಇರುವ ಮನೆಗಳನ್ನು ಗುರುತಿಸುತ್ತಿದ್ದ ಉಮೇಶ್ ರೆಡ್ಡಿ, ಯಾರೂ ಇಲ್ಲದ ಸಮಯ ನೋಡಿ ಕುಡಿಯಲು ನೀರು ಕೇಳಲು, ವಿಳಾಸ ತಿಳಿದುಕೊಳ್ಳುವ ನೆಪದಲ್ಲಿ ಮನೆ ಪ್ರವೇಶಿಸುತ್ತಿದ್ದ ಬಳಿಕ ಆಕ್ರಮಣ ಮಾಡಿ ಅತ್ಯಾಚಾರ ಎಸಗಿ, ಕೊಲೆಗೈಯುತ್ತಿದ್ದ. ಗೃಹಿಣಿಯರನ್ನು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಅತ್ಯಾಚಾರ ಮಾಡುತ್ತಿದ್ದ.
ಇನ್ನು ಈತ ಎಂಥ ವಿಕೃತ ಮನುಷ್ಯ ಅಂದ್ರೆ, ಒಂಟಿ ಮಹಿಳೆಯ ಮನೆಗೆ ನುಗ್ಗುತ್ತಿದ್ದ ರೆಡ್ಡಿ ಮೊದಲು ಮಹಿಳೆಯರಿಗೆ ಚಾಕು ತೋರಿಸಿ ಕಟ್ಟಿ ಹಾಕುತ್ತಿದ್ದ, ಬಳಿಕ ಬೆತ್ತಲು ಬಳಿ ಅತ್ಯಾಚಾರಗೈದು ಕೊಲೆ ಮಾಡುತ್ತಿದ್ದ. ತನ್ನ ಕಾರ್ಯ ಮುಗಿಸಿದ ಬಳಿಕ ಅದೇ ಮಹಿಳೆಯರ ಒಳ ಉಡುಪು, ಸೀರೆ ಹಾಗೂ ನಗ, ನಗದು ಕದ್ದು ಪರಾರಿಯಾಗುತ್ತಿದ್ದ.
ಇನ್ನು ಕೆಲವೊಮ್ಮೆ ಒಂಟಿ ಮಹಿಳೆಯರ ಮನೆಗೆ ನುಗ್ಗಿದವನೇ, ಮಹಿಳೆಯರ ಉಸಿರುಗಟ್ಟಿಸಿ ಪ್ರಜ್ಞಾ ಹೀನರನ್ನಾಗಿಸುತ್ತಿದ್ದ, ಬಳಿಕ ಅತ್ಯಾಚಾರಗೈಯುತ್ತಿದ್ದ. ಪೊಲೀಸರು ಪ್ರತೀ ಸಲ ಬಂಧಿಸಿದಾಗಲೆಲ್ಲಾ ಈತನ ಬಟ್ಟೆಯ ಒಳಗಡೆ ಮಹಿಳೆಯರ ಒಳ ಉಡುಪುಗಳು ಪತ್ತೆಯಾಗಿತ್ತು.
ಪೊಲೀಸರು ಈತನ ಮೇಲೆ ದಾಳಿ ನಡೆಸಿದ ಬಂಧಿಸಿದ್ದ ವೇಳೆ 10 ಬ್ರಾ, 18 ಪ್ಯಾಂಟಿ, 6 ಸೀರೆ, 2 ನೈಟಿ, 8 ಚೂಡಿದಾರ, 4 ಬ್ಲೌಸ್ಗಳು ದೊರೆತಿದ್ದವು. ಈ ಮೂಲಕ ಈತ ಎಂತಾ ವಿಕೃತಕಾಮಿ ಅನ್ನುವುದು ಬಯಲಾಗಿತ್ತು.
Discussion about this post