ಕಾರ್ಕಳ : ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ಅಶ್ವಥ ಕಟ್ಟೆಯಲ್ಲಿ ನಡೆದಿದೆ.
ನೇಣಿಗೆ ಶರಣಾದವರನ್ನು ಅಶ್ವಥಕಟ್ಟೆಯ ಬಾಂಕೋಡಿ ನಿವಾಸಿ ರೇಖಾ ( 33) ಎಂದು ಗುರುತಿಸಲಾಗಿದೆ.
ಮುಂಬೈ ನಲ್ಲಿ ಉದ್ಯಮಿಯಾಗಿದ್ದ ರವಿಶೆಟ್ಟಿ ಅವರೊಂದಿಗೆ ರೇಖಾ ವಿವಾಹ ಮೂರು ವರ್ಷಗಳ ಹಿಂದೆ ನಡೆದಿತ್ತು. ಉದ್ಯಮ ಚೆನ್ನಾಗಿದೆ ನಡೆಯುತ್ತಿದೆ ಅನ್ನುವಷ್ಟರಲ್ಲಿ ಕೊರೋನಾ ಸೋಂಕಿನ ಕಾಟ ಶುರುವಾಗಿತ್ತು. ಲಾಕ್ ಡೌನ್ ಕಾರಣದಿಂದ ರವಿ ಶೆಟ್ಟಿ ಉದ್ಯಮ ನಷ್ಟಕ್ಕೆ ತುತ್ತಾಯಿತು. ಇದರಿಂದ ಮನನೊಂದ ರವಿಶೆಟ್ಟಿ ಕಳೆದ ವರ್ಷ ಆತ್ಮಹತ್ಯೆ ಶರಣಾಗಿದ್ದರು.
ಪತಿಯನ್ನು ಕಳೆದುಕೊಂಡ ರೇಖಾ ತಾಯಿ ತಾರಾ ಶೆಟ್ಟಿಯವರೊಂದಿಗೆ ವಾಸವಾಗಿದ್ದರು. ಗಂಡನನ್ನು ಕಳೆದುಕೊಂಡ ಬಳಿಕ ಮಾನಸಿಕವಾಗಿ ಖಿನ್ನರಾಗಿದ್ದ ಅವರು ಆ ನೋವಿನಿಂದ ಹೊರ ಬಂದಿರಲಿಲ್ಲ. ಇದೀಗ ಎರಡನೆ ಅಲೆ ಪ್ರಾರಂಭವಾದ ಬಳಿಕ ಮತ್ತಷ್ಟು ಮಂಕಾಗಿದ್ದ ರೇಖಾ ನೇಣಿಗೆ ಕೊರಳೊಡ್ಡಿದ್ದಾರೆ.
ಈ ಪಾಪಿ ಚೈನಾ ವೈರಸ್ ಇನ್ನು ಏನೇನು ಮಾಡಲಿದೆಯೋ..
Discussion about this post