ಕುಮಟಾ : ಅಕ್ರಮ ಗೋಸಾಗಾಟ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೊಳಿಸಿದ್ದರೂ, ದನ ಕಳ್ಳರ ಹಾವಳಿ ಮಾತ್ರ ಇನ್ನೂ ನಿಂತಿಲ್ಲ. ಮೇಯಲು ಬಿಟ್ಟ ದನವನ್ನು ಕದ್ದು ಮಾಂಸ ಮಾಡುವವರ ಸಂಖ್ಯೆ ಕಡಿಮೆಯಿಲ್ಲ.
ಈ ನಡುವೆ ಹೊರ ರಾಜ್ಯಗಳಿಂದಲೂ ಕರ್ನಾಟಕಕ್ಕೆ ಅಕ್ರಮ ಮಾರ್ಗವಾಗಿ ಜಾನುವಾರು ಸಾಗಾಟ ನಡೆಯುತ್ತಿದೆ. ಸಕ್ರಮವಾಗಿ ಕಾನೂನು ಪ್ರಕಾರ ಜಾನುವಾರು ಸಾಗಾಟಕ್ಕೆ ಅವಕಾಶ ಇದ್ದರೂ ಅಕ್ರಮ ಸಾಗಾಟ ನಡೆಯುತ್ತಿದೆ ಅಂದ್ರೆ ಅದೊಂದು ದಂಧೆ ಅನ್ನುವುದರಲ್ಲಿ ಎರಡು ಮಾತಿಲ್ಲ.
ಹೀಗೆ ಪಂಜಾಬ್ ನಿಂದ ಜಾನುವಾರು ತುಂಬಿಸಿಕೊಂಡು ಉಡುಪಿಗೆ ಬರುತ್ತಿದ್ದ ವಾಹನವನ್ನು ತಡೆದಿರುವ ಕುಮಟಾ ಪೊಲೀಸರು 14 ಜಾನುವಾರುಗಳನ್ನು ರಕ್ಷಿಸಿ ಗೋಶಾಲೆಗೆ ಸೇರಿಸಿದ್ದಾರೆ.
ಲಾರಿಯಲ್ಲಿ ಜಾನುವಾರಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊoಡು ಪಂಜಾಬ್ ನಿoದ ಉಡುಪಿಗೆ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಕುಮಟಾ ಪೊಲೀಸರು ಹೊಳೆಗದ್ದೆ ಟೋಲ್ ಗೇಟ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪಂಜಾಬ್ ನ ಸಾಹಿಬ್ ಪಾಟೇಗಾರ ನಿವಾಸಿ ಅನಿಲ್ ಕುಮಾರ್ ಚಾರಂಜಿತ್ ರತನ್ ಹಾಗೂ ಜಗದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
Discussion about this post