ದುನಿಯಾ ವಿಜಿ ಮನೆಯಲ್ಲಿ ಇದೀಗ ಸವತಿ ಜಗಳ ಜೋರಾಗಿದೆ. ಜಿಮ್ ಟ್ರೈನರ್ ಮೇಲೆ ಕೈ ಮಾಡಿ ದುನಿಯಾ ವಿಜಿ ಪರಪ್ಪನ ಅಗ್ರಹಾರ ಸೇರಿದ್ದಾರೆ, ಇತ್ತ ಅವರ ಇಬ್ಬರು ಪತ್ನಿಯರ ಕಚ್ಚಾಟ ಪೊಲೀಸ್ ಮೆಟ್ಟಿಲೇರಿದೆ.
ವಿಜಯ್ ಎರಡನೇ ಪತ್ನಿ ಕೀರ್ತಿಗೌಡ ಹೊಡೆದರು ಎಂದು ನಾಗರತ್ನ ದೂರು ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಕೀರ್ತಿಗೌಡ ಒಬ್ಬರ ಮೇಲೆ ಕೈ ಮಾಡುವಂತಹ ಬುದ್ಧಿ ಇಲ್ಲ ನನಗಿಲ್ಲ ಅಂದಿದ್ದಾರೆ.
ನಾಗರತ್ನ ನೀಡಿರುವ ದೂರಿನ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ದೂರಿನ ಬಗ್ಗೆ ತನಿಖೆ ನಡೆಯುತ್ತಿದೆ. ಅದ್ರ ಬಗ್ಗೆ ಪೊಲೀಸರೇ ಮಾತನಾಡ್ತಾರೆ, ಕಂಪ್ಲೈಂಟ್ ಕಾಪಿ ನೋಡಿ ನನಗೆ ಶಾಕ್ ಆಯ್ತು ಒಂದು ಕಡೆ ಅವ್ರು ನೋವಲ್ಲಿದ್ದಾರೆ ಈ ಸಮಯದಲ್ಲಿ ನಾನೇನು ಮಾತನಾಡಲು ಇಷ್ಟಪಡಲ್ಲ. ಅವರನ್ನು ಬಿಡುಗಡೆ ಮಾಡಿಸುವುದು ನಮ್ಮ ಆದ್ಯತೆ.
ನಾವು ಮದುವೆಯಾಗಿ ಮೂರು ವರ್ಷ ಕಳೆದಿದೆ ಈಗ ಅನೈತಿಕ ಸಂಬಂಧ ಅಂತಾ ಹೇಳ್ತಾರೆ ಹೇಳಲಿ ತೊಂದರೆ ಇಲ್ಲ, ಕೇಸ್ ಮೇಲೆ ಕೇಸ್ ಬರ್ತಿವೆ, ಪರವಾಗಿಲ್ಲ ಎಲ್ಲಾ ಫೇಸ್ ಮಾಡೋಕೆ ರೆಡಿ ಮಾಡ್ತೀವಿ ಅಂದಿದ್ದಾರೆ.
Discussion about this post