ಹೆತ್ತ ತಾಯಿಯ ಮೇಲೆಯೇ ಪಾಪಿ ಮಗನೊಬ್ಬ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ತಾಯಿಯ ಮೇಲೆಯೇ ಎರಗಿಬಿದ್ದ ಕಾಮುಕ ಪುತ್ರ ಡ್ರಗ್ಸ್ ನಶೆಯಲ್ಲಿ ಮಾಡಬಾರದ ಕೃತ್ಯ ಎಸಗಿದ್ದಾನೆ. ಈ ವೇಳೆ ತಾಯಿ ಪ್ರತಿರೋಧ ತೋರಿದಾಗ ಬ್ಲೇಡ್ ತೋರಿಸಿ ಬೆದರಿಸಿ ಅಮ್ಮನ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ತಿಲ್ಲಾ ಮೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಲಮ್ ನಲ್ಲಿ ಈ ಘಟನೆ ನಡೆದಿದ್ದು, ಕುಡಿತ ಹಾಗೂ ಮಾದಕ ವ್ಯಸನಿಯಾಗಿದ್ದ ಯುವಕ ತಾಯಿಯ ಮುಂದೆಯೇ ತಮ್ಮ ಕಾಮದಾಸೆ ತೋರಿಸಿದ್ದಾನೆ. ಬೇಡಿಕೆಗೆ ಮಣಿಯದೇ ಹೋದ ವೇಳೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಚಾಕು ತೋರಿಸಿ ಬೆದರಿಸಿದ್ದಾನೆ. ಈ ವೇಳೆ ಮಗನ ವರ್ತನೆಯಿಂದ ಗಾಬರಿಗೊಂಡ ತಾಯಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕುತ್ತಿಗೆಗೆ ಬ್ಲೇಡ್ ಹಿಡಿದು ಕೃತ್ಯ ಎಸಗಿದ್ದಾನೆ.
ಈ ಬಗ್ಗೆ ದೂರು ಸ್ವೀಕರಿಸಿರುವ ಪೊಲೀಸರು ತಾಯಿಯನ್ನು ರಕ್ಷಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಪಾಪಿ ಪುತ್ರನನ್ನು ಜೈಲಿಗಟ್ಟಿದ್ದಾರೆ.
A man in Ghaziabad allegedly raped his mother under the influence of alcohol and drugs
Discussion about this post