ನವದೆಹಲಿ : 10 ವರ್ಷದ ಬಾಲಕಿ ಮೇಲೆ 48 ವರ್ಷದ ಮೌಲ್ವಿಯೊಬ್ಬ ಮಸೀದಿಯೊಳಗೆ ರೇಪ್ ಮಾಡಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಭಾನುವಾರ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಇಮಾಮ್ ಇಲ್ಯಾಸ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೊರೋನಾದಿಂದ ನಲುಗಿ ಹೋಗಿರುವ ನಗರದಲ್ಲಿ ಇಂತಹ ಹೇಯ ಕೃತ್ಯ ನಡೆದಿರುವುದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಈಶಾನ್ಯ ದೆಹಲಿಯ ಹರ್ಷ ವಿಹಾರ್ ನಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ಸಂಜೆ ಬಾಲಕಿಯನ್ನು ನೀರು ತರುವ ಸಲುವಾಗಿ ಪೋಷಕರೇ ಮಸೀದಿಗೆ ಕಳುಹಿಸಿದ್ದರು. ಈ ವೇಳೆ ಮಸೀದಿಯಲ್ಲಿ ಒಬ್ಬನೇ ಇದ್ದ ಮೌಲ್ವಿ ಅತ್ಯಾಚಾರ ಎಸಗಿ, ನಂತರ ಚಾಕಲೇಟ್ ಕೊಟ್ಟು ವಿಷಯವನ್ನು ಯಾರಿಗೂ ಹೇಳಬಾರದು ಎಂದು ತಿಳಿಸಿ ಕಳುಹಿಸಿದ್ದ. ಆದರೆ ಘಟನೆಯಿಂದ ಘಾಸಿಗೊಂಡಿದ್ದ ಬಾಲಕಿ ಮೌಲ್ವಿಯ ದುಷ್ಕ್ಯತದ ಬಗ್ಗೆ ಪೋಷಕರಿಗೆ ವಿವರಿಸಿದ್ದಳು.
ವಿಷಯ ಬಹಿರಂಗವಾಗುತ್ತಿದ್ದಂತೆ ಆಕ್ರೋಶಗೊಂಡ ಪೋಷಕರು ಮಸೀದಿಯತ್ತ ದೌಡಾಯಿಸಿದ್ದಾರೆ. ಮಾಲ್ವಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಗಲಾಟೆ ಕೇಳಿ ಜನ ಸೇರತೊಡಗಿದ್ದಾರೆ. ಮುಂದೆ ಮಾರಿಹಬ್ಬ ಕಾದಿದೆ ಅನ್ನುವುದು ಗೊತ್ತಾಗುತ್ತಿದ್ದಂತೆ ಮಸೀದಿ ಕಾಂಪೌಂಡ್ ಹಾರಿದ ಮಾಲ್ವಿ ಪರಾರಿಯಾಗಿದ್ದಾನೆ.
ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯ್ತು. ಆರೋಪಿಯ ಬೆನ್ನು ಹತ್ತಿದ ಪೊಲೀಸರು ಮೌಲ್ವಿಯನ್ನು ಬಂಧಿಸಿದ್ದಾರೆ, ದುರಂತೆ ಅಂದ್ರೆ ಈ ಮೌಲ್ವಿಗೆ ಈಗಾಗಲೇ ನಾಲ್ಕು ಜನ ಮಕ್ಕಳಿದ್ದಾರಂತೆ.
Discussion about this post