ಮನೆಯಲ್ಲಿ ಮನ ತುಂಬಾ ಪ್ರೀತಿಸುವ ಪತ್ನಿ ಇದ್ದರೂ ಪರಸ್ತ್ರೀಯರ ಹುಚ್ಚಿಗೆ ಬಿದ್ದ ಪಾಪಿಯೊಬ್ಬ ಮಕ್ಕಳ ಮುಂದೆಯೇ ಪತ್ನಿಯನ್ನು ಕೊಲೆ ( Crime news) ಮಾಡಿದ್ದಾನೆ
ಮಂಡ್ಯ : ಪರಸ್ತ್ರೀಯರ ಹುಚ್ಚಿಗೆ ಬಿದ್ದ ಪಾಪಿಯೊಬ್ಬ ತನ್ನ ಇಬ್ಬರ ಮಕ್ಕಳ ಎದುರೇ ತಾಳಿ ಕಟ್ಟಿದವಳನ್ನೇ ಕೊಲೆ ಮಾಡಿದ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ತಂದೆಯ ಕ್ರೌರ್ಯದ ದೃಶ್ಯವನ್ನು ನೋಡಿದ ಮಕ್ಕಳೇ ಬೆಚ್ಚಿ ಬಿದ್ದಿದ್ದಾರೆ. ( Crime news ) ಮೃತಳನ್ನು ಯೋಗಿತಾ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಪಾಪಿಯನ್ನು ರವಿ ಗೌಡ ಎಂದು ಗುರುತಿಸಲಾಗಿದೆ.
9 ವರ್ಷಗಳ ಹಿಂದೆ ಕೆ.ಆರ್.ಪೇಟೆ ಮೂಡನಹಳ್ಳಿಯ ಯೋಗಿತಾಳನ್ನು ಮಂಡ್ಯದ ಶ್ರೀರಂಗಪಟ್ಟಣದ ಗೆಂಡೆಹೊಸಹಳ್ಳಿ ಗ್ರಾಮದ ರವಿ ಗೌಡನಿಗೆ ವಿವಾಹ ಮಾಡಿಕೊಡಲಾಗಿತ್ತು. ಇದಾದ ಬಳಿಕ ಯೋಗಿತಾ ಇಬ್ಬರು ಮಕ್ಕಳಿಗೆ ಜನ್ಮವನ್ನೂ ನೀಡಿದ್ದಳು.
ಮದುವೆಯಾದ ಕೆಲ ವರ್ಷಗಳ ಕಾಲ ಎಲ್ಲವೂ ಚೆನ್ನಾಗಿತ್ತು. ಆದರೆ ವರ್ಷ ಕಳೆದಂತೆ ರವಿಗೆ ಪರಸ್ತ್ರೀಯರ ವ್ಯಾಮೋಹ ಶುರುವಾಗಿದೆ. ಹೀಗಾಗಿ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಯಾವಾಗ ಯೋಗಿತಾಳಿಗೆ ಗಂಡ ಬೇಲಿ ಹಾರುವ ವಿಚಾರ ಗೊತ್ತಾಯಿತೋ, ರವಿಯನ್ನು ಪ್ರಶ್ನಿಸಿದ್ದಾಳೆ. ಈ ಕಾರಣದಿಂದ ರವಿ ಗೌಡ ಯೋಗಿತಾಗೆ ಹೊಡೆಯುವುದು, ಬೈಯುವುದು ಪ್ರಾರಂಭಿಸಿದ.
ಈ ನಡುವೆ ರವಿ ಗೌಡ ಪರಸ್ತ್ರೀಯೊಬ್ಬಳ ಜೊತೆ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ ಯೋಗಿತಾ ತವರಿಗೆ ವಿಷಯ ಮುಟ್ಟಿಸಿದ್ದಳು. ಇದಾದ ಬಳಿಕ ರಾಜಿ ಪಂಚಾಯತಿ ನಡೆಸಿ ಎಲ್ಲವನ್ನೂ ಸರಿ ಮಾಡಲಾಗಿತ್ತು. ಆದರೆ ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅಂತಾರಲ್ಲ ರವಿ ಗೌಡ ತನ್ನ ಚಾಳಿ ಮುಂದುವರಿಸಿದ್ದ.
ಇದನ್ನೂ ಓದಿ : ಶಿವರಾಜ್ ಕುಮಾರ್ ಅವರ ನಿಜವಾದ ಹೆಸರೇನು ಗೊತ್ತಾ..? ಪಾಸ್ ಪೋರ್ಟ್ ಹೇಳಿದ ಕಥೆ
ಈ ನಡುವೆ ಬುಧವಾರ ರವಿ ಗೌಡ ಮಕ್ಕಳಿಗೆ ಪಾನಿ ತಂದು ಕೊಟ್ಟಿದ್ದ. ಅದನ್ನು ತಿನ್ನಬೇಡಿ ಎಂದು ಯೋಗಿತಾ ಮಕ್ಕಳಿಗೆ ಹೇಳಿದ್ದಾಳೆ. ಅಷ್ಟಕ್ಕೆ ಕೋಪಗೊಂಡ ರವಿ ಗೌಡ ಕೋಣೆಯೊಳಗೆ ಕರೆದುಕೊಂಡು ಹೋಗಿ ವೈರ್ ಅನ್ನು ಯೋಗಿತಾ ಕುತ್ತಿಗೆಗೆ ಬಿಗಿದು ಸಾಯಿಸಿದ್ದಾನೆ.
ತಂದೆಯ ಕೃತ್ಯ ನೋಡಿದ ಮಕ್ಕಳು ಗಾಬರಿಯಾಗಿ ಮನೆಯಿಂದ ಹೊರಗೆ ಕಿರುಚುತ್ತಾ ಓಡಿ ಬಂದಿದ್ದಾರೆ. ಈ ವೇಳೆ ಅಕ್ಕ ಪಕ್ಕದವರು ಬರುವ ಹೊತ್ತಿಗೆ ಯೋಗಿತಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ನೆರೆಹೊರೆಯವರು ಬರುವುದನ್ನು ಗಮನಿಸಿದ ರವಿ ಪರಾರಿಯಾಗಿದ್ದಾನೆ. ಇದೀಗ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಶಿವರಾಜ್ ಕುಮಾರ್ ಅವರ ನಿಜವಾದ ಹೆಸರೇನು ಗೊತ್ತಾ..? ಪಾಸ್ ಪೋರ್ಟ್ ಹೇಳಿದ ಕಥೆ
ದೊಡ್ಮನೆಯ ದೊಡ್ಡ ಮಗನನ್ನು ಕರುನಾಡು ಶಿವರಾಜ್ ಕುಮಾರ್ ( shivarajkumar) ಎಂದೇ ಕರೆಯುತ್ತದೆ. ಪ್ರೀತಿಯಿಂದ ಶಿವಣ್ಣ ಅಂದವರು ಇದ್ದಾರೆ. ಆದರೆ ಶಿವರಾಜ್ ಕುಮಾರ್ ಅವರ ನಿಜವಾದ ಹೆಸರು ಬೇರೆಯೇ ಇದೆಯಂತೆ.
ಕರುನಾಡ ಅಭಿಮಾನಿಗಳಿಂದ ಸೆಂಚುರಿ ಸ್ಟಾರ್, ಶಿವಣ್ಣ, ದೊಡ್ಮನೆ ಹುಡುಗ, ಜೋಗಿ ಶಿವಣ್ಣ ಎಂದೆಲ್ಲಾ ಕರೆಸಿಕೊಂಡ ಶಿವರಾಜ್ ಕುಮಾರ್ ಮನೆ ಮಂದಿಗೂ ಶಿವರಾಜ್ ಕುಮಾರ್ ಆಗಿ ಹೋಗಿದ್ದಾರೆ. ಪಾರ್ವತಮ್ಮ ಕೂಡಾ ಶಿವರಾಜ್ ಕುಮಾರ್ ಅವರನ್ನು ನಮ್ಮ ಶಿವಣ್ಣ ಎಂದೇ ಕರೆಯುತ್ತಿದ್ದರು. ಆದರೆ ಶಿವರಾಜ್ ಕುಮಾರ್ ಅನ್ನುವ ಹೆಸರಿನಲ್ಲಿ ಆದ್ಯಾವುದೇ ಸರ್ಕಾರಿ ದಾಖಲೆಗಳನ್ನು ಶಿವಣ್ಣ ಹೊಂದಿಲ್ಲ. ಬ್ಯಾಂಕ್ ಪಾಸ್ ಬುಕ್, ಪಾಸ್ ಪೋರ್ಟ್ ಹೀಗೆ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಶಿವಣ್ಣ ಹೆಸರು ಬೇರೆಯದ್ದೇ ಇದೆ. ಶಿವರಾಜ್ ಕುಮಾರ್ ಅನ್ನುವುದು ಕರುನಾಡಿಗರ ಹೃದಯಲ್ಲಿ ಅಚ್ಚಾದ ಹೆಸರು
ಹೌದು ತಮ್ಮ ನಿಜವಾದ ಹೆಸರು ಶಿವರಾಜ್ ಕುಮಾರ್ ಅಲ್ಲ ಅನ್ನುವುದನ್ನು ಶಿವಣ್ಣ ಅವರೇ ಬಹಿರಂಗ ಪಡಿಸಿದ್ದಾರೆ. ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನನ್ನ ನಿಜ ನಾಮಧೇಯ ಶಿವರಾಜ್ ಕುಮಾರ್ ಅಲ್ಲ ಅಂದಿದ್ದಾರೆ. ನನ್ನ ಹೆಸರು ನಾಗರಾಜು ಶಿವಪುಟ್ಟಸ್ವಾಮಿ. ಎಂ.ಎಸ್. ಪುಟ್ಟಸ್ವಾಮಿ ಅಂತಾನೇ ನಾನು ಬ್ಯಾಂಕ್ ಚೆಕ್ ಗಳಿಗೆ ಸಹಿ ಹಾಕುತ್ತೇನೆ. ಚೆನೈ ನಲ್ಲಿ ಈಗ್ಲೂ ನನ್ನ ಪುಟ್ಟು..ಪುಟ್ಟು ಅಂತಾನೇ ಕರೆಯುತ್ತಾರೆ ಎಂದು ನಾಮ ರಹಸ್ಯವನ್ನು ಬಯಲು ಮಾಡಿದ್ದಾರೆ.
ಹಾಗಾದ್ರೆ ಶಿವರಾಜ್ ಕುಮಾರ್ ಹೆಸರು ಬದಲಾಯಿಸಿಕೊಂಡ್ರ, ತಮ್ಮ ಹೆಸರು ಬೇರೆಯದ್ದೇ ಇದೆ ಅನ್ನುವುದರ ಹಿಂದಿನ ರಹಸ್ಯವೇನು ಎಂದು ಎಲ್ಲರೂ ಅಚ್ಚರಿಯಾಗಿದ್ದಾರೆ. ಹಾಗಂತ ಶಿವಣ್ಣ ಬಗ್ಗೆ ಒಂದಿಷ್ಟು ತಿಳಿದುಕೊಂಡವರಿಗೆ ಶಿವರಾಜ್ ಕುಮಾರ್ ಮೂಲ ಹೆಸರು ಗೊತ್ತಿರುತ್ತದೆ. ಸಾಕಷ್ಟು ಸಂದರ್ಶನಗಳಲ್ಲಿ ರಾಜ್ ಕುಮಾರ್ ಅವರೇ, ತಮ್ಮ ತಂದೆಯೇ ಹೆಸರನ್ನೇ ದೊಡ್ಡ ಮಗನಿಗೆ ಇಟ್ಟಿರುವುದಾಗಿ ಹೇಳಿದ್ದರು.
Discussion about this post