ಚಿಕ್ಕಮಗಳೂರು : ಹೆತ್ತ ತಾಯಿಯನ್ನೇ ಮಗನೇ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆಯಲ್ಲಿ ನಡೆದಿದೆ. ತಾಯಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಪಾಪಿ ಪುತ್ರ ತಾಯಿ ಹೆಣದ ಪಕ್ಕದಲ್ಲೇ ಕೂತಿದ್ದನಂತೆ.
ಮೃತರನ್ನು ಸುಧಾ (48) ಎಂದು ಗುರುತಿಸಲಾಗಿದ್ದು, ಕೊಲೆಗಾರನ್ನು ದುಶ್ಯಂತ್ (28) ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಸಂಜೆ 5.45ರ ಸುಮಾರಿಗೆ ಸುಧಾ ಅವರ ಕಿರಿಯ ಪುತ್ರ ಸಂತೋಷ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಗೆ ಕಾರಣವೇನು ಅನ್ನುವುದು ಇನ್ನೂ ಗೊತ್ತಾಗಿಲ್ಲ. ದುಶ್ಯಂತ್ ಮಾನಸಿಕ ಅಸ್ವಸ್ಥನಾಗಿದ್ದ ಅನ್ನುವುದು ಪ್ರಾಥಮಿಕ ಮಾಹಿತಿ.
ಇನ್ನು ಘಟನಾ ಸ್ಛಳಕ್ಕೆ ಬಸವನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Discussion about this post