ಚಿಕ್ಕಮಗಳೂರು: ಮಗ ಪ್ರೀತಿಸುತ್ತಿದ್ದ ಹುಡುಗಿಯ ಮೇಲೆ ಅಪ್ಪನೇ ಅತ್ಯಾತಾರ ಮಾಡಿದ ಘಟನೆ ಚಿಕ್ಕಮಗಳೂರಿನ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕಿ ಪ್ರಿಯಕರನನ್ನು ಹುಡುಕಿಕೊಂಡು ಮನೆಗೆ ಹೋಗಿದ್ದಾಗ ಆತನ ತಂದೆ ಈ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಸಂತ್ರಸ್ತೆಯ ತಾಯಿ ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಸಂತ್ರಸ್ತ ಬಾಲಕಿ 10ನೇ ತರಗತಿ ಓದುತ್ತಿದ್ದು, ಅತ್ತೆ ಮನೆಯಲ್ಲಿ ಇದ್ದುಕೊಂಡು ಶಾಲೆಗೆ ಹೋಗುತ್ತಿದ್ದಳು. ದೀಪಾವಳಿ ಹಬ್ಬಕ್ಕೆ ಅಂತಾ ತಾಯಿ ಮನೆಗೆ ಬಂದವಳು ಶಾಲೆ ಮುಗಿಸಿ ಅತ್ತೆ ಮನೆಗೆ ಹೋಗುವುದಾಗಿ ತಾಯಿಯಲ್ಲಿ ಹೇಳಿದ್ದಳು. ಆದರೆ ಯಾವಾಗ ಬಾಲಕಿಯ ಅತ್ತೆ ಮನೆಯವರು ಬಾಲಕಿ ತಾಯಿಗೆ ಕರೆ ಮಾಡಿ ಮಗಳು ಬಂದಿಲ್ಲ ಅಂದಿದ್ದಾರೆ. ಈ ಬಗ್ಗೆ ಹುಡುಕಾಟಿದಾಗ ಬಾಲಕಿ ಶಾಲೆಗೆ ಹೋಗದೆ ತನ್ನ ಪ್ರಿಯಕರನ ಮನೆಗೆ ಹೋಗಿರುವುದು ಗೊತ್ತಾಗಿದೆ. ತಕ್ಷಣ ಅಲ್ಲಿಗೆ ದೌಡಾಯಿಸಿದ ತಾಯಿ ಮಗಳನ್ನು ಕರೆ ತಂದಿದ್ದಾರೆ.
ಆಗ ಮಗಳು ಎರಡು ವರ್ಷದಿಂದ ಹುಡುಗನೊಬ್ಬನನ್ನು ಪ್ರೀತಿಸುತ್ತಿರುವುದು ಗೊತ್ತಾಗಿದೆ. ಅವನ ಮನೆಗೆ ಹೋದ ವೇಳೆ ಅವನು ಅಲ್ಲಿ ಇರಲಿಲ್ಲ. ಅವನ ತಂದೆ ಇದ್ರು, ಫೋನ್ ಮಾಡಿದೆ ಅವನಿಗೆ ಸಿಗಲಿಲ್ಲ. ಮನೆಯಲ್ಲಿ ಅವನ ತಂದೆ ಇದ್ರು, ಮಗ ನಾಳೆ ಬರುತ್ತಾನೆ, ನೀನು ಇವತ್ತು ಇಲ್ಲೇ ಉಳಿದುಕೋ ಅಂದ್ರು. ರಾತ್ರಿ ಊಟ ಮಾಡಿ ಪ್ರತ್ಯೇಕವಾಗಿ ಮಲಗಿದ್ದ ವೇಳೆ ಅವನ ತಂದೆ ನನ್ನ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ.
Discussion about this post