ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ( Chandrashekhar Guruji ) ಕೊಲೆಯಾಗಿದೆ. ಇಂದು ಮಧ್ಯಾಹ್ನ ಈ ಕೃತ್ಯ ನಡೆದಿದ್ದು, ಹಾಡಹಗಲೇ ಕೃತ್ಯ ನಡೆದಿರುವುದರಿಂದ ರಾಜ್ಯ ಬೆಚ್ಚಿ ಬಿದ್ದಿದೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ತನಿಖೆ ಸಂಬಂಧ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಂ ( Hubballi police commissioner Labhu Ram ) ಮಾಹಿತಿ ನೀಡಿದ್ದು, 5 ವಿಶೇಷ ತಂಡಗಳನ್ನು ರಚಿಸಿರುವುದಾಗಿ ಹೇಳಿದ್ದಾರೆ.
ಈ ನಡುವೆ ಚಂದ್ರಶೇಖರ ಗುರೂಜಿ ಹತ್ಯೆಗೆ ಕಾರಣವೇನು ಅನ್ನುವುದರ ಬಗ್ಗೆ ಪೊಲೀಸರು ಕೆಲವೊಂದು ವಿಷಯಗಳನ್ನು ಪಾಯಿಂಟ್ ಮಾಡಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಚಂದ್ರಶೇಖರ ಗುರೂಜಿ ಹೋಟೆಲ್ ನಿರ್ಮಾಣ ವಿಚಾರದಲ್ಲಿ ತಂಡವೊಂದರ ಜೊತೆಗೆ ಘರ್ಷಣೆ ಮಾಡಿಕೊಂಡಿದ್ದರು ಅನ್ನಲಾಗಿದೆ. ಹೀಗಾಗಿ ಕೊಲೆಯಾಗಿರಬಹುದೇ ಅನ್ನುವ ಕುರಿತಂತೆ ತಂಡವೊಂದು ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ : ಚಂದ್ರಶೇಖರ ಗುರೂಜಿ ಕೊಲೆ : ಪ್ರಾಣಕ್ಕೆ ಕುತ್ತು ತಂದ ಅದೊಂದು ತಪ್ಪು : ಲಾಬೂರಾಂ ಹೇಳಿದ್ದೇನು
ಮತ್ತೊಂದು ಕಡೆ ವಾಸ್ತು ವಿಚಾರದಲ್ಲಿ ಅನೇಕರಿಗೆ ಮೋಸವಾಗಿದೆ ಅನ್ನಲಾಗಿದೆ. ಚಂದ್ರಶೇಖರ ಗುರೂಜಿ ಕೊಟ್ಟ ಪರಿಹಾರಗಳು ಫಲ ನೀಡದ ಹಿನ್ನಲೆಯಲ್ಲಿ ಅನೇಕರು ಲಕ್ಷಾಂತರ ರೂಪಾಯಿ ಕೈ ಸುಟ್ಟುಕೊಂಡಿದ್ದರಂತೆ. ಈ ಪೈಕಿ ಕೆಲವರು ಪದೇ ಪದೇ ಫೋನ್ ಮಾಡಿ ಒತ್ತಡ ಹೇರುತ್ತಿದ್ದರು ಅನ್ನಲಾಗಿದೆ. ಈ ಪೈಕಿ ಯಾರಾದ್ರೂ ಕೃತ್ಯ ಎಸಗಿರಬಹುದೇ ಎಂದು ಶಂಕಿಸಲಾಗಿದೆ.
ಮಗದೊಂದು ಕಡೆ ತಮ್ಮ ಸಂಸ್ಥೆಯ ಕೆಲ ಉದ್ಯೋಗಿಗಳನ್ನು ಚಂದ್ರಶೇಖರ್ ಗುರೂಜಿ ಕೆಲಸದಿಂದ ತೆಗೆದಿದ್ದರು. ಈ ಕಾರಣಕ್ಕೆ ಪ್ರತೀಕಾರ ತೀರಿಸಲಾಗಿದೆಯೇ ಅನ್ನುವ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿದೆ.
ಇದೀಗ ಈ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಚಂದ್ರಶೇಖರ ಗುರೂಜಿ ಕೊಲೆ : ಪ್ರಾಣಕ್ಕೆ ಕುತ್ತು ತಂದ ಅದೊಂದು ತಪ್ಪು : ಲಾಬೂರಾಂ ಹೇಳಿದ್ದೇನು
ಹುಬ್ಬಳ್ಳಿ : ಸರಳ ವಾಸ್ತು ( saral Vaastu) ಸಂಸ್ಥೆಯ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ( chandrashekhar guruji Murder case ) ಅವರ ಕೊಲೆ ಪ್ರಕರಣ ಸಂಬಂಧದ ತನಿಖೆಯಲ್ಲಿ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಈ ನಡುವೆ ಕೊಲೆ ಕುರಿತಂತೆ ಮಾತನಾಡಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಂ ಮಾತನಾಡಿದ್ದು, ಹಂತಕರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಅಂದಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿರುವ ಪೊಲೀಸ್ ಆಯುಕ್ತ ಲಾಬೂರಾಂ ( Hubballi police commissioner Labhu Ram ) ಹೊಟೇಲ್ ನ ರೂಮ್ ನಲ್ಲಿದ್ದ ಚಂದ್ರಶೇಖರ ಗುರೂಜಿಯವರನ್ನು ಯಾರೋ ಫೋನ್ ಮಾಡಿ ಕೆಳಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಅವರು ಹೋಟೆಲ್ ನ ರಿಸೆಪ್ಸನ್ ಗೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ಎಸಿಪಿ 5 ಪೊಲೀಸರ ಐದು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಲಾಬೂರಾಮ್ ತಿಳಿಸಿದ್ದಾರೆ.
ಜುಲೈ 2ರಂದು ಹೋಟೆಲ್ ಗೆ ಬಂದಿದ್ದ ಚಂದ್ರಶೇಖರ ಗುರೂಜಿ ನಾಳೆ ರೂಮ್ ಕೊಠಡಿ ಖಾಲಿ ಮಾಡುವವರಿದ್ದರು. ಅಷ್ಟು ಹೊತ್ತಿಗೆ ಇವರ ಕೊಲೆ ಮಾಡಲಾಗಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಪರಿಚಿತರೇ ಈ ಕೃತ್ಯ ಮಾಡಿರುವ ಸಾಧ್ಯತೆಗಳಿದೆ. ಸಿಸಿಟಿವಿಯಲ್ಲಿ ದಾಖಲಾದ ಕೊಲೆ ಪ್ರಕರಣದ ದೃಶ್ಯಗಳನ್ನು ಗಮನಿಸಿದರೆ, ಗುರೂಜಿಗೆ ಇವರು ಪರಿಚಿತರು ಅನ್ನುವಂತಿದೆ. ರೂಮ್ ನಿಂದ ರಿಸೆಪ್ಸನ್ ಗೆ ಬಂದ ಗುರೂಜಿ ನಡೆದುಕೊಳ್ಳುವ ರೀತಿ, ಅವರು ಕಾಲಿಗೆ ಬಿದ್ದ ದೃಶ್ಯಗಳು ಹಲವು ಅನುಮಾನಕ್ಕೆ ಕಾರಣವಾಗಿದೆ.
Discussion about this post