ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ವಿಪರೀತ ಅನ್ನುವಂತೆ ಹೆಚ್ಚಾಗುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು, ಆತ್ಮಹತ್ಯೆ ತಡೆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತಕ್ಷಣ ಕಾರ್ಯಪ್ರವೃತವಾಗಬೇಕಿದೆ. ಆತ್ಮಹತ್ಯೆಯ ಹಿಂದೆ ನಿರುದ್ಯೋಗ, ಬಡತನ, ಹಣಕಾಸಿನ ಕೊರತೆಯೇ ಕಾರಣವಾಗಿ ಗೋಚರಿಸುತ್ತಿದೆ.
ಈ ನಡುವೆ ನಟಿ ಸವಿ ಮಾದಪ್ಪ ಯಾನೆ ಸೌಜನ್ಯಾ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆಕೆಯ ಡೆತ್ ನೋಟ್ ವಿಚಾರಕ್ಕೂ ನಡೆದಿರಬಹುದಾದ ಘಟನೆಗೂ ತಾಳೆಯಾಗುತ್ತಿಲ್ಲ. ಈಗಾಗಲೇ ಸವಿ ಮಾದಪ್ಪ ಪೋಷಕರು ಮಗಳ ಆತ್ಮಹತ್ಯೆಯ ಪ್ರಕರಣ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ಮುಂದುವರಿಸಿದ್ದಾರೆ. ಮನೆಯಲ್ಲಿ ಪತ್ತೆಯಾಗದ ಹಣ, ಒಡವೆ ಬೇರೆಯದೇ ಕಥೆ ಹೇಳ್ತಿವೆ ಎಂದು ನಟಿಯ ಪೋಷಕರು ಆರೋಪಿಸಿದ್ದಾರೆ.
ಹೀಗಾಗಿ ನಟಿಯ ಸಾವಿನ ಸುತ್ತ ವಿವೇಕ್ ಪ್ರೀತಿ, ಆನಾರೋಗ್ಯ, ಮದುವೆಯ ಹಠ ಹೀಗೆ ಹಲವಾರು ವಿಷಯಗಳು ಸುತ್ತುತ್ತಿದೆ. ಇದೀಗ ಸವಿ ಸೂಸೈಡ್ ರಹಸ್ಯಕ್ಕೆ 6 ಲಕ್ಷ ರೂಪಾಯಿ ಹಣದ ವಿಚಾರವೂ ಸೇರ್ಪಡೆಯಾಗಿದೆ.
ಮಗಳ ಜೊತೆಗಿದ್ದ 6 ಲಕ್ಷ ಹಣ ಹಾಗೂ ಆಕೆಯ ಆಭರಣಗಳು ಕಾಣಿಸುತ್ತಿಲ್ಲ. ಪೊಲೀಸರ ಮಹಜರು ಸಂದರ್ಭದಲ್ಲೂ ಇದು ಸಿಕ್ಕಿಲ್ಲ. ಹೀಗಾಗಿ ಮಗಳ ಹಣವನ್ನ ವಿವೇಕ್ ಎಲ್ಲೋ ಹೂಡಿಕೆ ಮಾಡಿದ್ದಾನೆ ಅನ್ನುವುದು ಪ್ರಭು ಮಾದಪ್ಪ ಆರೋಪ.ಮಗಳ ಸಾವಿನ ಸುದ್ದಿ ತಿಳಿದ ದಿನದಿಂದಲೂ ಸವಿ ಪೋಷಕರು ವಿವೇಕ್ ಹಿಂದೆ ಬಿದ್ದಿದ್ದಾರೆ. ಹೀಗಾಗಿ ವಿವೇಕ್ನ ಮದುವೆಯ ಹಠದಿಂದ, ಮಾನಸಿಕ ಒತ್ತಡವನ್ನು ಮಗಳು ಅನುಭವಿಸಿದ್ದಾಳೆ ಅನ್ನುವುದು ಆರೋಪ.
Discussion about this post