ಬೆಂಗಳೂರು : ಅಪಾರ್ಟ್ ಮೆಂಟ್ ಒಂದರ 11ನೇ ಮಹಡಿಯಿಂದ ಬಿದ್ದು 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯ ಶೋಭಾ ವ್ಯಾಲಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಪ್ರದೀಪ್ ಹಾಗೂ ಆರತಿ ದಂಪತಿಗಳ ಏಕೈಕ ಪುತ್ರ ಗಗನ್ ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯಾಹ್ನ ತಂದೆ ತಾಯಿ ಮಗುವನ್ನು ಮನೆಯಲ್ಲೇ ಬಿಟ್ಟು ಹೊರ ಹೋಗಿದ್ದರು. ತಮ್ಮ ಫ್ಲ್ಯಾಟ್ ನಲ್ಲಿ ಗಿಡಗಳನ್ನು ಬೆಳೆಸಲು ನಿರ್ಧರಿಸಿದ್ದ ದಂಪತಿ ಹೂ ಕುಂಡ ಖರೀದಿ ಸಲುವಾಗಿ ಹೊರಗೆ ತೆರಳಿದ್ದರು.
ಈ ವೇಳೆ ಆಟವಾಡಲು 11ನೇ ಮಹಡಿಗೆ ತೆರಳಿದ್ದ ಗಗನ್ ಆಯ ತಪ್ಪಿ 5ನೇ ಮಹಡಿಗೆ ಬಿದ್ದು ಉಸಿರು ಚೆಲ್ಲಿದ್ದಾನೆ. ಮನೆಗೆ ಮರಳಿದ ಪೋಷಕರು ಗಗನ್ ಗಾಗಿ ಹುಡುಕಾಡಿದ ವೇಳೆ ಗಗನ್ ಮೃತದೇಹ ಪತ್ತೆಯಾಗಿದೆ.
ನೆಲಮಂಗಲ ತಾಲೂಕಿನ ಪ್ರದೀಪ್ ಹಲವು ವರ್ಷಗಳಿಂದ ಶೋಭಾ ವ್ಯಾಲಿ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಪ್ರದೀಪಿ ಉದ್ಯೋಗಿಯಾಗಿದ್ದು, ಪತ್ನಿ ಆರತಿ ಗೃಹಿಣಿಯಾಗಿದ್ದಾರೆ. ಗಗನ್ 7ನೇ ತರಗತಿಯಲ್ಲಿ ಓದುತ್ತಿದ್ದ. ಕೊರೋನಾ ಕಾರಣದಿಂದ ತರಗತಿಗಳು ನಡೆಯುತ್ತಿಲ್ಲ. ಹೀಗಾಗಿ ಆನ್ ಲೈನ್ ನಲ್ಲೇ ಪಾಠ ಕೇಳುತ್ತಿದ್ದ.
ಹೂಕುಂಡಗಳನ್ನು ಖರೀದಿಸಿ ಮನೆಗೆ ಬಂದಾಗ ಗಗನ್ ಕಾಣಿಸಲಿಲ್ಲ. ನೆರೆ ಹೊರೆಯವರಲ್ಲಿ ವಿಚಾರಿಸಿದಾಗ ವಿಷಯ ಗೊತ್ತಾಗಲಿಲ್ಲ. ಈ ವೇಳೆ ಟೇರಸ್ ಗೆ ಹೋಗಿ ಹುಡುಕಾಡಿದರೆ 5ನೇ ಮಹಡಿಯಲ್ಲಿ ಗಗನ್ ಮೃತ ದೇಹ ಪತ್ತೆಯಾಗಿದೆ.
Discussion about this post