ಮೊಬೈಲ್ ಅನ್ನುವುದು ಇದೀಗ ಹಲವರ ಬದುಕಿಗೆ ಪಾಪಿಯಾಗಿ ಪರಿಣಮಿಸಿದೆ. ( bengaluru murder crime ) ಬಳಸಬಾರದ ಕೆಲಸಕ್ಕೆ ಮೊಬೈಲ್ ಬಳಸಿದ್ರೆ ಅದು ಮತ್ಯಾವುದಕ್ಕೋ ಎಡೆ ಮಾಡಿಕೊಡುತ್ತದೆ
ಬೆಂಗಳೂರು : 9ನೇ ತರಗತಿಯಲ್ಲಿ ಓದುತ್ತಿರುವ ಸಂಬಂಧಿಯಾದ ಬಾಲಕಿಗೆ ಮೆಸೇಜ್ ಮಾಡುತ್ತಿದ್ದ 17ರ ಹರೆಯದ ಬಾಲಕನನ್ನು ಹೊಡೆದು ಕೊಂದ ದಾರುಣ ಘಟನೆ ಬೆಂಗಳೂರಿನ ಹೊಸ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಬನಶಂಕರಿ ನಿವಾಸಿ ಪ್ರಜ್ವಲ್ ( 17 ) ಎಂದು ಗುರುತಿಸಲಾಗಿದೆ.( bengaluru murder crime ) ಹತ್ಯೆ ಸಂಬಂಧ ಬಾಲಕಿಯ ಚಿಕ್ಕಪ್ಪ ನಾಗೇಂದ್ರ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ನಾಗಶೆಟ್ಟಿ ಹಳ್ಳಿ ಗ್ರಾಮದ ಪ್ರಜ್ವಲ್ ಹಲವು ವರ್ಷಗಳಿಂದ ಕುಟುಂಬ ಸದಸ್ಯರೊಂದಿಗೆ ಬನಶಂಕರಿಯಲ್ಲಿ ನೆಲೆಸಿದ್ದ. ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಈತ ನ್ಯೂ ಬೈಯಪ್ಪನಹಳ್ಳಿಯಲ್ಲಿ ನೆಲೆಸಿರುವ ತನ್ನ ಸಂಬಂಧಿಯೊಬ್ಬರ ಪುತ್ರಿಗೆ ಮೆಸೇಜ್ ಮಾಡುತ್ತಿದ್ದ. ನನಗೆ ಮೆಸೇಜ್ ಮಾಡಬೇಡ ಎಂದು ಹೇಳಿದರೂ ಪ್ರಜ್ವಲ್ ಕೇಳಿರಲಿಲ್ಲ.
ಕೊನೆಗೆ ಈ ವಿಷಯ ತಿಳಿದ ಬಾಲಕಿಯ ಚಿಕ್ಕಪ್ಪ ನಾಗೇಂದ್ರ ಶುಕ್ರವಾರ ರಾತ್ರಿ ಮಾತುಕತೆ ಸಲುವಾಗಿ ಪ್ರಜ್ವಲ್ ನನ್ನು ಕರೆಸಿಕೊಂಡಿದ್ದಾರೆ. ಈ ವೇಳೆ ತಮ್ಮ ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ವೇಳೆ ಪ್ರಜ್ವಲ್ ಕೂಡಾ ತಿರುಗಿ ಮಾತನಾಡಿದ್ದಾನೆ ಅನ್ನಲಾಗಿದೆ. ಈ ಕಾರಣದಿಂದ ಇಬ್ಬರ ನಡುವೆ ಹೊಡೆದಾಟವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಒಂದು ಹಂತದಲ್ಲಿ ಆರೋಪಿಗಳು ದೊಣ್ಣೆಯಿಂದ ಪ್ರಜ್ವಲ್ ಗೆ ಹೊಡೆದಿದ್ದಾರೆ. ತಲೆಗೆ ಪೆಟ್ಟು ಬಿದ್ದ ಕಾರಣ ಪ್ರಜ್ವಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
ಮನೆ ಬಳಿ ಬಂದ ಪತ್ನಿಯ ಮಾಜಿ ಪ್ರಿಯತಮನ ಹತ್ಯೆ ಮಾಡಿ ಪತಿ
ಪ್ರೇಯಸಿ ಬೇರೆಯವನನ್ನು ಮದುವೆಯಾಗಿದ್ದನ್ನು ಸಹಿಸಲು ಸಾಧ್ಯವಾಗದ ಭಗ್ನ ಪ್ರೇಮಿ ಕಿರಿಕ್ ತೆಗೆದಿದ್ದ. ಇದೀಗ ಪ್ರಾಣವನ್ನೂ ಕಳೆದುಕೊಂಡಿದ್ದಾನೆ.
ಬೆಂಗಳೂರು : ಮಾಜಿ ಪ್ರೇಯಸಿಯ ಮನೆಗೆ ಬಂದು ಗಲಾಟೆ ಮಾಡಿದ ಭಗ್ನ ಪ್ರೇಮಿಯೊಬ್ಬನನ್ನು ಮಾಜಿ ಪ್ರೇಯಸಿ ಗಂಡನೇ ಕೊಲೆ ಮಾಡಿದ ಘಟನೆ ಶಿವಾಜಿನಗರದಲ್ಲಿ ನಡೆದಿದೆ. ಮೃತನನ್ನು ಜಾವದ್ ಖಾನ್ (25) ಎಂದು ಗುರುತಿಸಲಾಗಿದೆ.
ಶಿವಾಜಿನಗರದ ನಿವಾಸಿಯಾಗಿದ್ದ ಸಿಮ್ರಾನ್ ಮತ್ತು ಮೃತ ಜಾವದ್ ಖಾನ್ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ವರ್ಷಗಳ ಕಾಲ ಪ್ರೀತಿಯಲ್ಲಿ ಇದ್ದ ಇವರು ವೈಮನಸ್ಸಿನ ಕಾರಣದಿಂದ ಇತ್ತೀಚೆಗೆ ಬೇರೆಯಾಗಿದ್ದರು. ಬಳಿಕ ಮೆಡಿಕಲ್ ರೆಪ್ ಜಿನಾಶ್ ಜೊತೆ ಸಿಮ್ರಾನ್ ವಿವಾಹವಾಗಿದ್ದಳು. ಈ ಮದುವೆಯಿಂದ ಕೆರಳಿದ್ದ ಜಾವದ್, ಮಾಜಿ ಪ್ರೇಯಸಿಯ ಮನೆ ಬಳಿ ಬಂದು ಪದೇ ಪದೇ ಗಲಾಟೆ ಮಾಡುತ್ತಿದ್ದ.
ಇದನ್ನೂ ಓದಿ : zameer ahmed khan : ವಿಚಾರಿಸಬೇಕಿದೆ ಬನ್ನಿ : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಮೀರ್’ಗೆ ಎಸಿಬಿ ನೋಟಿಸ್
ಹಾಗೇ ಶುಕ್ರವಾರ ರಾತ್ರಿ ಮತ್ತೆ ಸಿಮ್ರಾನ್ ಮನೆ ಬಳಿ ಬಂದ ಜಾವದ್ ಖಾನ್, ಕಿರಿಕ್ ತೆಗೆದಿದ್ದಾನೆ. ಈ ವೇಳೆ ಸಿಮ್ರಾನ್ ಪತಿ ಜಿನಾಶ್ ಹಾಗೂ ಜಾವದ್ ಖಾನ್ ನಡುವೆ ಜಗಳವಾಗಿದೆ. ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಆಗ ಜಿನಾಶ್ ಕೈಯಲ್ಲಿದ್ದ ಕತ್ತರಿಯಿಂದ ಖಾನ್ ಕುತ್ತಿಗೆಗೆ ಇರಿದಿದ್ದಾನೆ. ಹಲ್ಲೆಗೆ ಒಳಗಾದ ಖಾನ್ ಸಮೀಪದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾನೆ. ಆದರೆ ಆಸ್ಪತ್ರೆ ಸೇರಿದ ಕೆಲವೇ ಕ್ಷಣದಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.
ಇದೀಗ ಸಿಮ್ರಾನ್ ಮತ್ತು ಆಕೆಯ ಗಂಡನನ್ನು ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
Discussion about this post