ವಿಧಾನಸಭೆಯಲ್ಲಿ ಮೈಸೂರು ಯುವತಿ ಮೇಲಿನ ಅತ್ಯಾಚಾರ ಮೇಲೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರದ ಪ್ರಕರಣ ದಾಖಲಾಗಿದೆ.
ರಾತ್ರಿ ಪಾರ್ಟಿ ಮುಗಿಸಿ ಮನೆಗೆ ತೆರಳುವ ಸಲುವಾಗಿ ಯುವತಿಯೊಬ್ಬಳು ಕ್ಯಾಬ್ ಬುಕ್ ಮಾಡಿದ್ದಳು. ನಿಗದಿಯಂತೆ ಆಕೆ ಮಲ್ಲೇಶ್ ಪಾಳ್ಯಕ್ಕೆ ಹೋಗಬೇಕಾಗಿತ್ತು. ಆದರೆ ಯುವತಿ ಪಾನಮತ್ತಳಾಗಿರುವುದನ್ನು ಗಮನಿಸಿದ ಕ್ಯಾಬ್ ಡ್ರೈವರ್ ನಿರ್ಜನಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಸತ್ಯಾಸತ್ಯೆಯನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಒಂದು ವೇಳೆ ಅತ್ಯಾಚಾರವಾಗಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕ ತಕ್ಷಣ ತನಿಖೆಗೆ ವೇಗ ಸಿಗಲಿದೆ. ಈಗಾಗಲೇ ಯುವತಿಯ ದೂರಿನ ಆಧಾರದಲ್ಲಿ ಕ್ಯಾಬ್ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.
Discussion about this post