ಬೆಂಗಳೂರು : ಕೋರಮಂಗಲ audi crash ಪ್ರಕರಣ ಕುರಿತಂತೆ ಪೊಲೀಸರ ತನಿಖೆ ಮುಂದುವರಿದಿದ್ದು, 7 ಜನರ ಸಾವಿಗೆ ನಿಖರ ಕಾರಣವೇನು ಅನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕಾರಿನಲ್ಲಿದ್ದ 7 ಜನರೂ ಸತ್ತು ಹೋದ್ರು ಇನ್ನು ತನಿಖೆ ಮಾಡಿ ಮಾಡುವುದೇನಿದೆ, ಯಾರಿಗೆ ಶಿಕ್ಷೆ ಕೊಡಲಿದೆ ಅನ್ನುವ ಪ್ರಶ್ನೆ ಉದ್ಭವಿಸಬಹುದು. ಹಾಗಂತ ತನಿಖೆ ಮಾಡದಿರುವಂತಿಲ್ಲ. ಈ ಡೆಡ್ಲಿ ಆಕ್ಸಿಡೆಂಟ್ ಇನ್ನೂ ಹಲವು ಯುವಜನರಿಗೆ, ಎರ್ರಾಬಿರ್ರಿ ಕಾರು ಓಡಿಸುವವರಿಗೊಂದು ನೀತಿ ಪಾಠವಾಗಬೇಕಿದೆ.
ಇನ್ನು ಪ್ರಕರಣ ಕುರಿತಂತೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ನೈಟ್ ಕರ್ಫ್ಯೂ ಇದ್ದರೂ ವಿದ್ಯಾವಂತರಾಗಿದ್ದ ಅವರು ಅಷ್ಟೊಂದು ತಡರಾತ್ರಿ ಸುತ್ತಾಡಿದ್ದು ಯಾಕೆ. ನೈಟ್ ಕರ್ಫ್ಯೂ ಕಾರಣದಿಂದ ಬಾರ್ ಪಬ್ ಗಳು ಬಾಗಿಲು ಹಾಕಿರುತ್ತದೆ ಅಂದ ಮೇಲೆ ಇವರು ಎಲ್ಲಿ ಟೈಮ್ ಪಾಸ್ ಮಾಡಿದ್ದರು. ಎಲ್ಲಾದರೂ ಪಾರ್ಟಿ ಮಾಡಿದ್ರ ಅನ್ನುವ ಪ್ರಶ್ನೆಗಳು ಹುಟ್ಟಿವೆ.
ಜೊತೆಗೆ ತಮಿಳುನಾಡು ಶಾಸಕನ ಪುತ್ರ ಸೋಮವಾರ ಹಗಲು ಹೊತ್ತಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುತ್ತಾಡಿರುವುದು ಪತ್ತೆಯಾಗಿದ್ದು, ಹಾಗಿದ್ದ ಮೇಲೆ ಕಟ್ಟಡ ಕಾಮಗಾರಿಯ ಖರೀದಿಗೆಂದು ಬೆಂಗಳೂರಿಗೆ ಬಂದಿದ್ದ, ಮೆಡಿಸಿನ್ ತರಲು ಸಿಟಿಗೆ ಬಂದಿದ್ದ ಅನ್ನುವುದು ಸುಳ್ಳಾ.
ಇನ್ನು ಘಟನೆಯಲ್ಲಿ ಮೃಪಟ್ಟಿರುವ ಹುಡುಗಿಯರಿಬ್ಬರು ರಾತ್ರಿ 9ರ ಸುಮಾರಿಗೆ ಪಿಜಿಯಿಂದ ಹೊರಗೆ ಬಂದಿದ್ದಾರೆ.ಬಹುತೇಕ ಪಿಜಿಗಳು ರಾತ್ರಿ ಹೊತ್ತಲ್ಲಿ ಮಹಿಳೆಯರನ್ನು ಹೊರಗಡೆ ಹೋಗಲು ಬಿಡುವುದಿಲ್ಲ. ಕೆಲಸಕ್ಕೆ ಬಿಟ್ರೆ ಮೋಜು ಮಸ್ತಿ ಎಂದು ಹೋಗಲು ಬಿಡುವುದಿಲ್ಲ. ಅಂದ ಮೇಲೆ ಬಿಂದು ಹಾಗೂ ಆಕೆಯ ಸ್ನೇಹಿತೆ ಆ ರಾತ್ರಿ ಹೊತ್ತಲ್ಲಿ ಹೊರಗಡೆ ಹೇಗೆ ಬಿಟ್ರು. ಘಟನೆ ನಡೆದಿರುವ ಟೈಮ್ ನೋಡಿದ್ರೆ ಮೋಜು ಮಸ್ತಿ ಮಾಡಲು ಹೋಗಿ ಅನ್ಯಾಯವಾಗಿ 7 ಜನ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಪೋಷಕರಿಂದ ದೂರವಿರುವ ಮಕ್ಕಳಿಗೊಂದು ನೀತಿ ಪಾಠ. ಮನೆಯವರಿಗೆ ಸುಳ್ಳು ಹೇಳಿ, ಸುತ್ತಬಾರದ ಹೊತ್ತಲ್ಲಿ ಸುತ್ತಿದ್ರೆ ಹೀಗಾಗುತ್ತದೆ. ಹೆತ್ತವರು ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಮಕ್ಕಳನ್ನು ವಿದ್ಯೆ, ಉದ್ಯೋಗ ಎಂದು ಕಳುಹಿಸುತ್ತಾರೆ. ಇನ್ನು ಪೋಷಕರು ಕೂಡಾ ಮಕ್ಕಳು ದೂರದಲ್ಲಿದ್ದಾರೆ ಅಂದಾಗ ಒಂದಿಷ್ಟು ಕಾಳಜಿ ವಹಿಸಬೇಕು.
Discussion about this post