ಇದೊಂದು ರೀತಿಯಲ್ಲಿ ಸ್ವಲ್ಪ ವಿಚಿತ್ರ ಅನ್ನಿಸುವ ಪ್ರಕರಣ. ದೂರು ದಾಖಲಾಗಿರುವುದು ಗಂಭೀರ ಆರೋಪವಾಗಿರುವ ಕಾರಣ ಪೊಲೀಸರು ಕೂಡಾ ಪ್ರಕರಣವನ್ನು ಗಂಭೀರವಾಗಿಯೇ ತೆಗೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ನಿವಾಸಿ, ವೃತ್ತಿಯಲ್ಲಿ ರೂಪದರ್ಶಿಯಾಗಿರುವ ಯುವತಿಯೊಬ್ಬಳು ನೈಟ್ ಕ್ಲಬ್ ಮ್ಯಾನೇಜರ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಜೊತೆಗೆ ಅತ್ಯಾಚಾರದ ಬಳಿಕ ಗರ್ಭಿಣಿಯಾಗಿರುವ ನನ್ನ ಗರ್ಭಪಾತ ಮಾಡುವಂತೆ ಬಲವಂತಪಡಿಸಿದ್ದಾನೆ ದೂರಿನಲ್ಲಿ ಹೇಳಲಾಗಿದೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸೋನಾರ್ಪುರ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡ ವೇಳೆ ಸಾಮಾಜಿಕ ಜಾಲತಾಣದ ಮೂಲಕ ನೈಟ್ ಕ್ಲಬ್ ಮ್ಯಾನೇಜರ್ ಹಾಗೂ ಮಾಡೆಲ್ ಗೆ ಸ್ನೇಹ ಬೆಳೆದಿದ್ದು ಗೊತ್ತಾಗಿದೆ. ಜೊತೆಗೆ ಇವರಿಬ್ಬರ ಪೋಷಕರು ಈ ತಿಂಗಳ ಅಂತ್ಯದೊಳಗೆ ಮದುವೆ ಮಾಡಲು ಒಪ್ಪಿದ್ದರು ಅನ್ನುವುದೂ ಗೊತ್ತಾಗಿದೆ. ಆದರೆ ಈ ನಡುವೆ ಇವರಿಬ್ಬರ ನಡುವೆ ನಡೆಯಬಾರದ್ದು ನಡೆದು ಪ್ರಕರಣ ಪೊಲೀಸ್ ಠಾಣೆ ತನಕ ಹೋಗಿದೆ.
Discussion about this post