ಬೆಂಗಳೂರು : ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದು ಡಿಬಾರ್ ಆದ ಬಿಕಾಂ ವಿದ್ಯಾರ್ಥಿನಿ ಲೇಡಿಸ್ ಪಿಜಿ ಕಟ್ಟಡದ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮರಜ್ಯೋತಿನಗರದ ನ್ಯೂ ಎಸ್ ಎನ್ ಎಸ್ ಲಕ್ಸುರಿ ಪಿಜಿಯಲ್ಲಿ ನಡೆದಿದೆ.
ಮೃತಳನ್ನು ಕೋರಮಂಗಲದ ಜ್ಯೋತಿನಿವಾಸ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ 19 ವರ್ಷದ ಭವ್ಯ ಎಂದು ಗುರುತಿಸಲಾಗಿದೆ, ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಾಳೆ ಎಂದು ಪರೀಕ್ಷಾ ಹಾಲ್ ನಿಂದ ಈಕೆಯನ್ನು ಡಿಬಾರ್ ಮಾಡಲಾಗಿತ್ತು. ಇದಾದ ಬಳಿಕ ಸಹೋದರಿಗೆ ಕರೆ ಮಾಡಿದ್ದ ಭವ್ಯ, ನನ್ನ ಡಿಬಾರ್ ಮಾಡಿದ್ದಾರೆ. ನಾನು ಬದುಕೋದಿಲ್ಲ, ನನ್ನ ಹುಡುಕೋ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾಳೆ. ಇದರ ಬೆನ್ನಲ್ಲೇ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ
ತಕ್ಷಣ ತಂದೆ ಕರೆ ಮಾಡಿದ ದಿವ್ಯಾ, ಭವ್ಯಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ವಿಚಾರವನ್ನು ತಿಳಿಸಿದ್ದಾಳೆ. ತಕ್ಷಣ ಮುಳುಬಾಗಿಲಿನಿಂದ ಬೆಂಗಳೂರಿಗೆ ಭವ್ಯ ತಂದೆ ದೌಡಾಯಿಸಿದ್ದಾರೆ. ಇನ್ನೇನು ಸ್ಥಳ ತಲುಪಬೇಕು ಅನ್ನುವ ಹೊತ್ತಿಗೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತ ಕರೆ ಪೊಲೀಸರಿಂದ ಬಂದಿದೆ.
ಇದೀಗ ಈ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಲೇಜಿನಲ್ಲಿ ನಡೆದ ಘಟನೆಯಿಂದ ಮಾನಸಿಕವಾಗಿ ನೊಂದು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿದ್ದಾರೆ.
Discussion about this post