ಕಳೆದ ಬುಧವಾರ ಅಹಮದಾಬಾದ್ನ ಅವನಿ ಸ್ಕೈ ಅಪಾರ್ಟ್ ಮೆಂಟ್ ನಲ್ಲಿ ನಡೆದ ಗುಜರಾತ್ ಉದ್ಯಮಿ, ಪತ್ನಿ ಹಾಗೂ ಮಗಳ ಸಾವಿನ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಆದರೆ ಇದೀಗ ಶವವಾಗಿ ಪತ್ತೆಯಾಗಿದ್ದ ಕುರಿತು ನಡೆಸಿದ ಪೊಲೀಸರಿಗೆ ಭಯಾನಕ ಸತ್ಯವೊಂದು ಸಿಕ್ಕಿದೆ.
ಉದ್ಯಮಿ ಕುನಾಲ್ ತ್ರಿವೇದಿ(45) ವಾಸವಿದ್ದ ಫ್ಲ್ಯಾಟ್ ನ ಬೆಡ್ ರೂಮಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದರು. ಅದೇ ವೇಳೆ ಪತ್ನಿ ಕವಿತಾ(45) ಮತ್ತು ಮಗಳಾದ ಶ್ರೀನ್(16) ಅವರು ಹೆಣವೂ ಪತ್ತೆಯಾಗಿತ್ತು.
ತ್ರಿವೇದಿ ತನ್ನ ಪತ್ನಿ ಹಾಗೂ ಮಗಳನ್ನು ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಈ ಮೊದಲು ತಿಳಿಯಲಾಗಿತ್ತು
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಸಿಕ್ಕ ಡೆತ್ ನೋಟ್ ಪ್ರಕಾರ ಅಮಾನುಷ ಶಕ್ತಿಯೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿತ್ತು. ಇದೀಗ ಮತ್ತೊಂದು ಡೆತ್ ನೋಟ್ ಪತ್ತೆಯಾಗಿದ್ದು, ಪತಿಯ ಮಾಜಿ ಪ್ರೇಯಸಿಯ ಪ್ರೇತಾತ್ಮವೇ ನಮ್ಮ ಸಾವಿಗೆ ಕಾರಣ ಎಂದು ಕವಿತಾ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಮೃತರ ಸಂಬಂಧಿಗಳು ತ್ರಿವೇದಿ ದಂಪತಿಗೆ ಪದೇ ಪದೆ ಕರೆ ಮಾಡಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪ್ರಕಾರ ಪೊಲೀಸರು ಬಾಗಿಲು ಮುರಿದಾಗ ತ್ರಿವೇದಿ ತಾಯಿ ಜಯಶ್ರೀಬೆನ್(75) ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Discussion about this post