ಬೆಂಗಳೂರು : ಕಳೆದ ತಿಂಗಳು ಅಂದ್ರೆ ಸಪ್ಟಂಬರ್ 30 ರಂದು ಆತ್ಮಹತ್ಯೆಗೆ ಶರಣಾದ ನಟಿ ಸೌಜನ್ಯ ( ಸವಿ ಮಾದಪ್ಪ ) ಸಾವಿನ ರಹಸ್ಯವನ್ನು ಪೊಲೀಸರು ಪತ್ತೆ ಹಚ್ಚಿದ್ದು ಇದೊಂದು ‘Cause of death hanging’ ಅನ್ನುವ ತೀರ್ಮಾನಕ್ಕೆ ಬಂದಿದ್ದಾರೆ.
ಇದನ್ನೂ ಓದಿ : ಲಿವಿಂಗ್ ಟುಗೆದರ್ ನಲ್ಲಿದ್ದ ಕನ್ನಡದ ಕಿರುತೆರೆ ನಟಿ ಆತ್ಮಹತ್ಯೆ
ಸೌಜನ್ಯಾ ಆತ್ಮಹತ್ಯೆ ಪ್ರಕರಣದ ಮರಣೋತ್ತರ ವರದಿ ತನಿಖಾಧಿಕಾರಿ ಕೈಸೇರಿದ್ದು, ಈ ಮೂಲಕ ನಟಿಯ ಸಾವಿನ ಸುತ್ತ ಹುಟ್ಟಿಕೊಂಡಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಮಣೋತ್ತರ ವರದಿಯಲ್ಲಿ ‘Cause of death hanging’ ಎಂದು ಉಲ್ಲೇಖವಾಗಿರುವುದು ಇದೊಂದು ಆತ್ಮಹತ್ಯ ಅನ್ನುವುದು ಪಕ್ಕಾ ಆಗಿದೆ.
ಇದನ್ನೂ ಓದಿ : ಕಿರುತೆರೆ ನಟಿ ಸೌಜನ್ಯ ಕೊಲೆಯೋ ಆತ್ಮಹತ್ಯೆಯೋ ಸಾವಿನ ಸುತ್ತ ಅನುಮಾನದ ಹುತ್ತ
ಇನ್ನು ಇದೇ ವರದಿಯ ಆಧಾರದಲ್ಲಿ ತನಿಖೆ ಮುಂದುವರಿಯಲಿದ್ದು, ಆತ್ಮಹತ್ಯೆಗೆ ಕಾರಣ ಏನಿರಬಹುದು ಅನ್ನುವ ಕುರಿತಂತೆ ಪೊಲೀಸರು ಹುಡುಕಾಟ ನಡೆಸಲಿದ್ದಾರೆ. ಸವಿ ಮಾದಪ್ಪ ಅವರಿಗೆ ಯಾರಾದ್ರೂ ಕಿರುಕುಳ ಕೊಟ್ಟಿದ್ರ, ಯಾರಾದ್ರೂ ಮಾನಸಿಕ ಒತ್ತಡ ಕೊಟ್ಟಿದ್ರ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಯಾರಾದ್ರೂ ಮಾಡಿದ್ರು ಹೀಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯಲಿದೆ.

ಇದನ್ನೂ ಓದಿ : ಕಿರುತೆರೆ ನಟಿ ಸೌಜನ್ಯ ಸಾವಿಗೆ ಸ್ಫೋಟಕ ತಿರುವು : ನಟನ ಕೈವಾಡದ ಶಂಕೆ
ಮಾಹಿತಿಗಳ ಪ್ರಕಾರ ಬಣ್ಣದ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವ ಕನಸು ಕಂಡಿದ್ದ ಸೌಜನ್ಯ,ಅವಕಾಶ ಸಿಗದೆ ಖಿನ್ನತೆಗೆ ಒಳಗಾಗಿದ್ದರಂತೆ. ಹೀಗಾಗಿ ಈ ಇದು ಕೂಡಾ ಆತ್ಮಹತ್ಯೆಗೆ ಕಾರಣವಾಯ್ತೇ ಅನ್ನುವ ಕುರಿತಂತೆ ಪೊಲೀಸರು ತನಿಖೆ ನಡೆಸಲಿದ್ದಾರೆ.
ಇದನ್ನೂ ಓದಿ : ಅಂತ್ಯಸಂಸ್ಕಾರದ ವೇಳೆ ಸವಿ ಮಾದಪ್ಪ ಪಾರ್ಥಿವ ಶರೀರಕ್ಕೆ ಮದುವೆ ಶಾಸ್ತ್ರ
ಇನ್ನು ಸೌಜನ್ಯ ಶವದ ಜೊತೆಗೆ ಸಿಕ್ಕಿರುವ ಡೆತ್ ನೋಟ್ ಅನ್ನ್ನು FSLಗೆ ರವಾನಿಸಲಾಗಿದ್ದು, ಇದರಲ್ಲಿರುವ ಕೈ ಬರಹ ಸೌಜನ್ಯ ಅವರದ್ದೇನಾ ಅನ್ನುವ ವರದಿ ಬರಬೇಕಾಗಿದೆ. ಇನ್ನು ಸೌಜನ್ಯ ಪೋಷಕರ ದೂರಿನ ಮೇರೆಗೆ ಸೌಜನ್ಯ ಸ್ನೇಹಿತ ವಿವೇಕ್, ಪಿಎ ಮಹೇಶ್ ಅವರನ್ನೂ ವಿಚಾರಣೆ ನಡೆಸಲಾಗಿದ್ದು, ಇಬ್ಬರ ಮೊಬೈಲ್ ಫೋನ್ ವಿವರಗಳನ್ನು ಪರಿಶೀಲನೆ ನಡೆಸಲಾಗಿದ್ದು ವಿವೇಕ್ ಕಿರುಕುಳ ನೀಡಿರುವ ಬಗ್ಗೆ ಯಾವುದೇ ಸಾಕ್ಷಿ ದೊರೆತಿಲ್ಲ ಅನ್ನಲಾಗಿದೆ.
ಇದನ್ನೂ ಓದಿ : ಸವಿ ಮಾದಪ್ಪ ಸಾವಿಗೆ 6 ಲಕ್ಷದ ನಂಟು : ನಟಿಯ ಸಾವಿಗೆ ಮೇಜರ್ ಟ್ವಿಸ್ಟ್

Discussion about this post