ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ ( Mysuru crime)
ಮೈಸೂರು : ಸಾಂಸ್ಕೃತಿಕ ನಗರಿಯ ಮೈಸೂರು-ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಬೆಳಗ್ಗೆ ನಡೆದ ಕೊಲೆ ಪ್ರಕರಣ ( Mysuru crime) ಬೇಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಪ್ರಿಯಕರ ಆಶಿಕ್ (28) ಎಂಬಾತನನ್ನು ಬಂಧಿಸಲಾಗಿದೆ.
ಆಗಸ್ಟ್ ತಿಂಗಳ ಕೊನೆಗೆ ಹೋಟೆಲ್ ಗೆ ಬಂದಿದ್ದ ಅಪೂರ್ವ ಶೆಟ್ಟಿ (21) ಮತ್ತು ಆಶಿಕ್ (28) ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಸಪ್ಟಂಬರ್ 1 ರಂದು ಬೆಳಗ್ಗೆ 7.30ರ ಸುಮಾರಿಗೆ ಆಶಿಕ್ ಹೋಟೆಲ್‍ನಿಂದ ಹೊರ ಹೋಗಿದ್ದು ಬಳಿಕ ಹಿಂತಿರುಗಿರಲಿಲ್ಲ. ಮಧ್ಯಾಹ್ನದ ವೇಳೆಗೆ ಅಪೂರ್ವ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಆಕೆಯನ್ನು ಗುರುವಾರ ಬೆಳಗ್ಗೆ ಕೊಲೆ ಮಾಡಲಾಗಿದೆಯೇ? ಅಥವಾ ಬುಧವಾರವೇ ಕೊಲೆ ಮಾಡಲಾಗಿತ್ತೇ ಎಂಬುದು ತನಿಖೆ ನಂತರ ತಿಳಿಯಬೇಕಾಗಿದೆ.
Read More : Papad kerala : ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ಗಲಾಟೆ : 1.5 ಲಕ್ಷ ರೂಪಾಯಿ ನಷ್ಟ
ಇನ್ನು ಮೃತಳನ್ನು ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕು, ರಾವಂದೂರು ಹೋಬಳಿ, ಹರಳಹಳ್ಳಿ ಗ್ರಾಮದ ರವಿ ಎಂಬುವರ ಪುತ್ರಿ ಎಂದು ಗುರುತಿಸಲಾಗಿದೆ.
ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರ್ ಪದವಿ ಓದುತ್ತಿದ್ದ ವಿದ್ಯಾರ್ಥಿನಿ ಅಪೂರ್ವ ಶೆಟ್ಟಿ, ಆಗಸ್ಟ್ 29ರಂದು ರಾತ್ರಿ ಪ್ರಿಯಕರ ಆಶಿಕ್ ಜೊತೆ ವಿನೋಬ ರಸ್ತೆಯಲ್ಲಿರುವ ಹೋಟೆಲ್‍ವೊಂದರ 2ನೇ ಮಹಡಿಯ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಕೊಠಡಿ ಪಡೆಯುವಾಗ ಆಶಿಕ್, ಹಿನಕಲ್ ಗ್ರಾಮ ಎಂದು ವಿಳಾಸ ನೀಡಿದ್ದ.

ಇದೇ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ಗಲಾಟೆಯಲ್ಲಿ ಆರೋಪಿ ಆಶಿಕ್, ಅಪೂರ್ವ ಶೆಟ್ಟಿಯ ಮೇಲೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಪ್ರೇಯಸಿಯನ್ನು ಕೊಲೆ ಮಾಡಿದ ಬಳಿಕ ಹೋಟೆಲ್ ರೂಮ್ನಿಂದ ಎಸ್ಕೇಪ್ ಆಗಿದ್ದ, ಆರೋಪಿ ಆಶಿಕ್ ಪಿರಿಯಾಪಟ್ಟಣದ ಕಂಪ್ಲಾಪುರ ಬಳಿ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ಆದರೆ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆರೋಪಿ ಇದ್ದ ಸ್ಥಳವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಘಟನೆಯ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post