ಕೊಡಗು : ಸಪ್ಟಂಬರ್ 30 ರಂದು ಆತ್ಮಹತ್ಯೆ ಮಾಡಿಕೊಂಡಿರುವ ನಟಿ ಸವಿ ಮಾದಪ್ಪ ಯಾನೆ ಸೌಜನ್ಯ ಅಂತ್ಯಸಂಸ್ಕಾರ ಶುಕ್ರವಾರ ಸ್ವಗ್ರಾಮ ಅಂದಗೋವೆಯಲ್ಲಿ ನೆರವೇರಿತು.
ಈ ವೇಳೆ ಸವಿಮಾದಪ್ಪ ಅವರಿಗೆ ಮದುವೆಶಾಸ್ತ್ರವನ್ನು ಕೂಡಾ ನೆರವೇರಿಸಲಾಗಿದೆ. ಸವಿಗೆ ಇನ್ನೂ ಮದುವೆ ಆಗಿರಲಿಲ್ಲ. ಸವಿ ಮಾದಪ್ಪ ಕುಟುಂಬದ ಸಂಪ್ರದಾಯದ ಪ್ರಕಾರ ಅವಿವಾಹಿತರ ಅಂತ್ಯಸಂಸ್ಕಾರಕ್ಕೂ ಮುನ್ನ ಮದುವ ನೆವೇರಿಸಲಾಗುತ್ತದೆ. ಹೀಗಾಗಿ ಸಂಪ್ರದಾಯದ ಪ್ರಕಾರ ಸವಿಗೆ ಮದುವೆ ಶಾಸ್ತ್ರ ನಡೆಸಲಾಗಿದೆ.
ಬಾಳೆಯ ದಿಂಡನ್ನು ಮಧುಮಗನಂತೆ ಅಲಂಕರಿಸಿ. ಸವಿ ಪಾರ್ಥಿವ ಶರೀರಕ್ಕೂ ವಧುವಿನಂತೆ ಶೃಂಗಾರ ಮಾಡಿ ನಂತರ ಮಗಳ ಪಾರ್ಥಿವ ಶರೀರಕ್ಕೆ ತಾಯಿಯೇ ತಾಳಿ ಕಟ್ಟಿದ್ದಾರೆ. ಸವಿ ಮಾದಪ್ಪ ಆತ್ಮಕ್ಕೆ ಮೋಕ್ಷ ಸಿಗಲು ಈ ವಿವಾಹ ಶಾಸ್ತ್ರ ನಡೆಸಲಾಗಿದೆ.
ಈ ನಡುವೆ ಮಗಳ ಸಾವಿನ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಸವಿ ಮಾದಪ್ಪ ಅವರು ಗೆಳೆಯ ಬಾಯ್ಫ್ರೆಂಡ್ ವಿವೇಕ್ ಜೊತೆ ವಾಸವಿದ್ದರು ಎನ್ನಲಾಗಿದೆ. ಆದರೆ ಪೋಷಕರಿಗೆ ಈ ಮಾಹಿತಿ ಗೊತ್ತಿರಲಿಲ್ಲವಂತೆ. ಹೀಗಾಗಿ ಇದೀಗ ಸವಿ ಮಾದಪ್ಪ ಅವರ ತಂದೆಯ ದೂರಿನ ಅನ್ವಯ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಸವಿ ಮಾದಪ್ಪ ಅವರ ಆಪ್ತ ಸಹಾಯಕನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ಮಗಳ ಪ್ರೀತಿಗೆ ತಂದೆ ವಿರೋಧ ವ್ಯಕ್ತಪಡಿಸಿದ ಕಾರಣದಿಂದಲೇ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿರಬೇಕು ಅನ್ನುವ ಸಂಶಯವೂ ವ್ಯಕ್ತವಾಗಿದೆ.
Discussion about this post