Kerala honey trap ವ್ಯವಹಾರ ಬದಲಾಗಿದೆ. ಪಂಚೆ ಗಟ್ಟಿ ಇಲ್ಲ ಅಂದ್ರೆ ಸುಂದರಿಯರು ಬೀಸಿದ ಬಲೆಗೆ ಬೀಳಲೇಬೇಕು
ಪಾಲಕ್ಕಾಡ್ : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಿಲ್ಲದ ಸುಂದರಿಯ ಫೋಟೋಗಳಿಗೆ ಕಮೆಂಟ್ ಹಾಕುವ ಮುನ್ನ ಎಚ್ಚರವಾಗಿರಿ. ನಿಮ್ಮ ಪೋಟೋಗಳಿಗೆ ಬರುವ ಲೈಕ್ ಕಮೆಂಟ್ ಗಳಿಗೆ ಮಾರು ಹೋಗುವ ಮುನ್ನವೂ ಎಚ್ಚರವಾಗಿರಿ. ಸುಂದರವಾದ ಹೆಣ್ಮಕ್ಕಳ ದನಿ ಎಂದು ಮಾರು ಹೋದ್ರಿ ಕಥೆ ಮುಗಿಯಿತು, ಯಾಕಂದ್ರೆ ಅದು ಗಂಡು ಮಕ್ಕಳೇ ಮಾಡುವ ಕಿತಾಪತಿಯಾಗಿರುತ್ತದೆ. ಹೀಗೆ ಬಕ್ರ ಆದ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.( Kerala honey trap)
ಇರಿಂಜಲಕುಡ ಮೂಲದ ಉದ್ಯಮಿಯೊಬ್ಬರನ್ನು ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಗ್ಯಾಂಗ್, ವೀಕ್ನೆಸ್ ಅನ್ನು ಬಳಸಿಕೊಂಡಿದೆ. ನಕಲಿ ಖಾತೆಯಲ್ಲಿ ಚಾಟ್ ಮಾಡಿ ಮೋಡಿ ಮಾಡಿದೆ. ಇದೇ ವೇಳೆ ಗ್ಯಾಂಗ್ ನ ಸದಸ್ಯ ಶರತ್ ಎಂಬಾತ ಉದ್ಯಮಿಯಿಂದ ನಂಬರ್ ಪಡೆದು ಹೆಣ್ಣಿನ ದನಿಯಲ್ಲಿ ಮಾತನಾಡಿ ನಂಬಿಸಿದ್ದಾನೆ. ತನ್ನ ಪತಿ ಗಲ್ಫ್‌ನಲ್ಲಿದ್ದಾನೆ ಮತ್ತು ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಹರಟೆ ಹೊಡೆಯುತ್ತಿದ್ದ.
Read More : Mandya honey trap : ಬಿಜೆಪಿ ಮುಖಂಡನಿಗೆ ಹನಿ ಟ್ರ್ಯಾಪ್ : ಸಲ್ಮಾಭಾನು ಎಂಬಾಕೆಯನ್ನು ಬಂಧಿಸಿದ ಪೊಲೀಸರು
ತನ್ನ ಜೊತೆ ಮಾತನಾಡುತ್ತಿರುವುದು ಮಹಿಳೆ ಎಂದು ನಂಬಿದ ಉದ್ಯಮಿ ಭೇಟಿಯಾಗಲು ಬಯಸಿದ್ದಾನೆ. ಮಿಕ ಬಲೆಗೆ ಬಿತ್ತು ಎಂದು ಅರಿತುಕೊಂಡ ಶರತ್, ದೇವು ಮತ್ತು ಗೋಕುಲ್ ದೀಪ್ ( Devu Gokul Deep) ಅನ್ನುವ ದಂಪತಿಯನ್ನು ಬಾಡಿಗೆಗೆ ಪಡೆದಿದ್ದಾನೆ. ಇನ್ಸ್ಟಾ ಖಾತೆಯಲ್ಲಿ 50 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಈ ಜೋಡಿ ಇದೇ ದಂಧೆಯಲ್ಲಿ ಪಳಗಿದವರು.
ಈ ವೇಳೆ ಉದ್ಯಮಿ ಜೊತೆಗೆ ದೇವು ಸಂಪರ್ಕ ಸಾಧಿಸಿದ್ದಾಳೆ. ಯಕ್ಕರದಲ್ಲಿ ಬಾಡಿಗೆಗೆ ಪಡೆದಿದ್ದ ಮನೆಗೆ ಉದ್ಯಮಿಯನ್ನು ಕರೆಸಿಕೊಂಡು ಮಂಚದಾಟದ ವಿಡಿಯೋಗಳನ್ನು ಗುಪ್ತವಾಗಿ ಚಿತ್ರೀಕರಿಸಿದ್ದಾಳೆ. ಇದಾದ ಬಳಿಕ ಮನೆಗೆ ನುಗ್ಗಿದ್ದ ಶರತ್ ಅಂಡ್ ಗ್ಯಾಂಗ್ ನೈತಿಕ ಪೊಲೀಸ್ ಗಿರಿ ನಡೆಸಿ ನಗ ನಗದು ದೋಚಿದ್ದಾರೆ.
ಬಳಿಕ ತಮ್ಮದೇ ಕಾರಿನಲ್ಲಿ ಕೊಡುಂಗಲ್ಲೂರಿನ ತಮ್ಮ ಫ್ಲಾಟ್‌ಗೆ ಕರೆದುಕೊಂಡು ಹೋಗಿ ಅವರಿಂದ ಹೆಚ್ಚಿನ ಹಣ ದೋಚಲು ಯತ್ನಿಸಿದ್ದಾರೆ. ಈ ವೇಳೆ ಕೊಡುಂಗಲ್ಲೂರಿಗೆ ಕರೆದೊಯ್ಯುತ್ತಿದ್ದಾಗ ವಾಹನದಿಂದ ಹೇಗೋ ಪರಾರಿಯಾಗಿ, ಟೌನ್ ಸೌತ್ ಠಾಣೆಗೆ ದೂರು ದಾಖಲಿಸಿದ್ದರು.
ಈ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇದೇ ದೂರಿನಡಿಯಲ್ಲಿ ಮಹಿಳೆಯೊಬ್ಬಳು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ದೇವು (24), ಆಕೆಯ ಪತಿ ಗೋಕುಲ್ ದೀಪ್ (29), ಶರತ್ (24), ಅಜಿತ್ (20), ವಿನಯ್ (24) ಮತ್ತು ಜಿಷ್ಣು (20) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಉದ್ಯಮಿಯಿಂದ ದೋಚಿದ್ದ ನಾಲ್ಕು ಚಿನ್ನದ ಸರ, ಕಾರು, ಮೊಬೈಲ್ ಫೋನ್, ಡೆಬಿಟ್/ಕ್ರೆಡಿಟ್ ಕಾರ್ಡ್, ಕಚೇರಿ ದಾಖಲಾತಿಗಳು ಮತ್ತು ಹಣ, ಉದ್ಯಮಿಯ ಬೆತ್ತಲೆ ಫೋಟೋ ಮತ್ತು ವಿಡಿಯೋವನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ ಇನ್ಸ್ಟಾ ಜೋಡಿ ಹನಿ ಟ್ರ್ಯಾಪ್ ವ್ಯವಹಾರದಲ್ಲಿ ತೊಡಗಿಸಿಕೊಂಡ್ರೆ 40 ಸಾವಿರ ಕಮಿಷನ್ ಪಡೆಯುತ್ತಿತ್ತು ಎಂದು ಗೊತ್ತಾಗಿದೆ. ಇದೇ ರೀತಿ ಈ ಜೋಡಿ ಅನೇಕರನ್ನು ಹನಿಟ್ರ್ಯಾಪ್ ಮಾಡಿದೆ ಅನ್ನಲಾಗಿದೆ
Discussion about this post