ಬೆಂಗಳೂರು : ಕನ್ನಡ ಕಿರುತೆರೆಯ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳಗೋಡಿನ ದೊಡ್ಡಬೆಲೆಯ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಮೃತ ನಟಿಯನ್ನು ಸೌಜನ್ಯ ಎಂದು ಗುರುತಿಸಲಾಗಿದೆ.
ಕುಂಬಳಗೋಡಿನ ದೊಡ್ಡಬೆಲೆಯ ಸನ್ ವರ್ಥ್ ಅಪಾರ್ಟ್ ಮೆಂಟ್ ನಲ್ಲಿ ಕಳೆದ ಕೆಲ ಸಮಯಗಳಿಂದ ತನ್ನ ಪ್ರಿಯಕರನ ಜೊತೆಗೆ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ ಸೌಜನ್ಯ ಇಂದು ಬೆಳಗ್ಗೆ ( ಗುರುವಾರ ) ಸ್ನೇಹಿತನಿಗೆ ತಿಂಡಿ ತೆಗೆದುಕೊಂಡು ಬರಲು ಕಳುಹಿಸಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ವೇಳೆ ಡೆತ್ ನೋಟ್ ಪತ್ತೆಯಾಗಿದ್ದು ಡೆತ್ ನೋಟ್ ನಲ್ಲಿ ತಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ತೆಗೆದುಕೊಂಡರೂ ಕಡಿಮೆಯಾಗುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲು ತಮಗೆ ಇಷ್ಟವಿಲ್ಲ ಹಾಗಿದ್ದರೂ ಬೇರೆ ದಾರಿ ತೋಚುತ್ತಿಲ್ಲ, ದಯವಿಟ್ಟು ಕ್ಷಮಿಸಿ ಎಂದು ಬರೆದುಕೊಂಡಿದ್ದಾಳೆ.

ಸೌಜನ್ಯ ಕೊಡಗಿನ ಕುಶಾಲನಗರದ ಮೂಲದವರಾಗಿದ್ದು ಕೆಲ ಧಾರಾವಾಹಿಗಳು ಹಾಗೂ ಚೌಕಟ್ಟು ಹಾಗೂ ಫನ್ ಸಿನೆಮಾಗಳಲ್ಲಿ ನಟಿಸಿದ್ದರು. ಪ್ರಾಥಮಿಕ ಮಾಹಿತಿಗಳ ಪ್ರಕಾರ ನಟಿ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದರು ಎಂದು ತಿಳಿದು ಬಂದಿದೆ.

Kannada television actress Soujanya died by suicide recently at her home in Kumbalgodu in Bengaluru. According to reports, Soujanya hung herself to death in her apartment in the city.
Discussion about this post