ಹೆಂಡ್ತಿಯನ್ನೇ ಹನಿ ಟ್ರ್ಯಾಪ್ ದಂಧೆಗೆ ಬಳಸಿಕೊಂಡ ಪತಿ ಅದ್ಯಾವ ಪಾಪಿ ಇರಬೇಕು
ಕಾಸರಗೋಡು : 59 ವರ್ಷದ ವ್ಯಕ್ತಿಯನ್ನು ಹನಿಟ್ರ್ಯಾಪ್ ( honey trap ) ಮಾಡಿ 5 ಲಕ್ಷ ರೂಪಾಯಿ ಪಟಾಯಿಸಿದ ಪ್ರಕರಣದಲ್ಲಿ ದಂಪತಿ ಸೇರಿದಂತೆ 7 ಮಂದಿಯನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಲ್ಲಿಕೋಟೆ ಪೆರುಮಣ್ಣ ನಿವಾಸಿ ಪಿ. ಫೈಝಲ್ (37),ಆತನ ಪತ್ನಿ ಕುಟ್ಟಿಕ್ಕಾಟೂರ್ ನಿವಾಸಿ ಎಂ.ಪಿ. ರುಬೀನಾ (29), ಕಾಸರಗೋಡು ಶಿರಿಬಾಗಿಲು ನಿವಾಸಿ ಎನ್. ಸಿದ್ದಿಕ್ (48), ಮಾಂಙಾಡ್ನ ದಿಲಾದ್ (40), ಮುಟ್ಟತ್ತೋಡಿಯ ನಫೀಸತ್ ಮಿಸ್ರಿಯ (40), ಮಾಂಙಾಡ್ನ ಅಬ್ದುಲ್ಲ ಕುಂಞಿ (32) ಮತ್ತು ಪಡನ್ನಕ್ಕಾಡ್ನ ರಫೀಕ್ (42) ಎಂದು ಗುರುತಿಸಲಾಗಿದೆ.
ಹನಿ ಟ್ರ್ಪಾಪ್ ಸಲುವಾಗಿ 59 ವರ್ಷದ ವ್ಯಕ್ತಿಯೊಬ್ಬರನ್ನು ಟಾರ್ಗೇಟ್ ಮಾಡಿದ್ದ ದಂಪತಿ ಪ್ಲಾನ್ ಪ್ರಕಾರವೇ ಸಮಾಜ ಸೇವೆಯಲ್ಲಿ ಹೆಸರುವಾಸಿಯಾದ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡಿದ್ದರು. ರುಬಿನಾ ಎಂದು ತನ್ನನ್ನು ಪರಿಚಯ ಮಾಡಿಕೊಂಡಿದ್ದ ಈಕೆ ತಾನು ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದಳು.
![kasaragod honey trap 03](https://torrentspree.com/wp-content/uploads/2024/02/kasaragod-honey-trap-03.jpg)
ಜನವರಿ 23 ರಂದು ಮೊಬೈಲ್ ಮೂಲಕ 59 ವರ್ಷದ ವ್ಯಕ್ತಿಗೆ ಕರೆ ಮಾಡಿ, ಶೈಕ್ಷಣಿಕ ಉದ್ದೇಶಕ್ಕಾಗಿ ಖರೀದಿಸಿದ ಲ್ಯಾಪ್ ಟಾಪ್ ಹಾಳಾಗಿದೆ. ನಿಮ್ಮ ಸಮಾಜ ಸೇವೆ ಬಗ್ಗೆ ತಿಳಿದುಕೊಂಡಿದ್ದೇನೆ. ಹಾಗಾಗಿ ಸಹಾಯ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾಳೆ.
ಇದನ್ನೂ ಓದಿ : ಪುತ್ತಿಲ ಬಿಜೆಪಿಗೆ ಬಂದ್ರೆ ಕರಾವಳಿಯಲ್ಲಿ ಕಾಂಗ್ರೆಸ್ ಗೆ ಸಂಕಷ್ಟ…?
ಅದರಂತೆ ಯುವತಿಯೊಂದಿಗೆ ಕಾಸರಗೋಡಿಗೆ ಆಗಮಿಸಿದ ಸಮಾಜಸೇವಕ ಲ್ಯಾಪ್ ಟಾಪ್ ರಿಪೇರಿ ಸಾಧ್ಯವಿಲ್ಲ ಹೊಸ ಲ್ಯಾಪ್ ಟಾಪ್ ಖರೀದಿಸಿ ಕೊಡುವುದಾಗಿ ಹೇಳಿದ್ದರು.
![kasaragod honey trap 01](https://torrentspree.com/wp-content/uploads/2024/02/kasaragod-honey-trap-01.jpg)
ಬಳಿಕ ಮಂಗಳೂರಿಗೆ ಬಂದ ಯುವತಿ ರುಬಿನಾ ಮಂಗಳೂರಿನ ವಸತಿ ಗೃಹವೊಂದಕ್ಕೆ ಆ ವ್ಯಕ್ತಿಯನ್ನು ಕೆದುಕೊಂಡು ಹೋಗಿ ಇತರರ ಜೊತೆಗೂಡಿ ಬಲವಂತದಿಂದ ನಗ್ನ ಫೋಟೊ ತೆಗೆಸಿಕೊಂಡಿದ್ದಾರೆ.
ಬಳಿಕ ಆರೋಪಿಗಳು ಸಂತ್ರಸ್ಥನನ್ನು ಬೆದರಿಸಿ ಕಾಸರೋಡಿನ ಪಡನ್ನಕ್ಯಾಡ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಗೃಹ ಬಂಧನದಲ್ಲಿರಿಸಿ ಹಿಂಸಿಸಿದ್ದಾರೆ. ನಂತರ 5 ಲಕ್ಷಕ್ಕೆ ಬೇಡಿಕೆ ಇಟ್ಟು, ಕೊಡದೇ ಹೋದಲ್ಲಿ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಪೊಲೀಸರಿಗೆ ದೂರು ನೀಡುವುದು ಮಾತ್ರವಲ್ಲದೆ ಈಗಾಗಲೇ ತೆಗೆದಿರುವ ಫೋಟೋಗಳನ್ನು ವೈರಲ್ ಮಾಡುವುದಾಗಿ ಹೇಳಿದ್ದಾರೆ.
ಇದರಿಂದ ಬೆದರಿದ ವ್ಯಕ್ತಿ ₹5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡ ಸಂತ್ರಸ್ಥ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
![kasaragod honey trap 02](https://torrentspree.com/wp-content/uploads/2024/02/kasaragod-honey-trap-02.jpg)
ಹಾಗೇ ನೋಡಿದರೆ ಕೇರಳದಲ್ಲಿ ಹನಿ ಟ್ರ್ಯಾಪ್ ಪ್ರಕರಣಗಳು ಹೊಸದಲ್ಲ.2021 ರಲ್ಲಿ ಸಾಜಿದಾ ಅಂಡ್ ಗ್ಯಾಂಗ್ ನಡೆಸಿದ ( Sajida (30), a resident of Nayanmarmoola, Kasargod ) ಹನಿಟ್ರ್ಯಾಪ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ( Kerala Police arrested seven people, including a woman, on Wednesday for embezzling around Rs 5 lakh from a 59-year-old man through ‘honey trap)
![kasaragod honey trap sajida](https://torrentspree.com/wp-content/uploads/2024/02/kasaragod-honey-trap-sajida.jpg)
Discussion about this post