ಸುಚೇಂದ್ರ ಪ್ರಸಾದ್ ಅವರಿಗೂ ಮದುವೆಯಾಗಿತ್ತು… ಆ ಸಂಸಾರ ಮುರಿದು ಬಿದ್ದಿದ್ದು ಯಾಕೆ
ಮೈಸೂರು : ತೆಲುಗು ನಟ ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ವಿಚಾರ ಇದೀಗ ಹಾದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ಕನ್ನಡ ಮಹಿಳೆಯೊಬ್ಬರಿಗೆ ನರೇಶ್ ಮತ್ತು ಪವಿತ್ರ ಕಡೆಯಿಂದ ಅನ್ಯಾಯವಾಗುತ್ತಿದೆ ಅನ್ನುವ ದೂರುಗಳು ಕೇಳಿ ಬಂದಿದೆ. ಈ ನಡುವೆ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದ ನರೇಶ್ ಮತ್ತು ಪವಿತ್ರ ನಮ್ಮ ನಡುವೆ ಏನಿಲ್ಲ ನಾವಿಬ್ಬರು ಗೆಳೆಯರು ಅಂದಿದ್ದರು. ಆದರೆ ಅವರಿಬ್ಬರ ನಡೆ ನುಡಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಕಳೆದ ಹಲವು ವರ್ಷಗಳಿಂದ ಆಂಧ್ರದಲ್ಲಿ ಅವರು ಓಡಾಡುತ್ತಿರುವುದನ್ನು ನೋಡಿದಾಗಲೇ ಅನುಮಾನ ಬಂದಿತ್ತು.
ಈ ನಡುವೆ ನರೇಶ್ ಅವರ ಪವಿತ್ರ ಬಂಧನದ ವಿರುದ್ಧ ಸಿಡಿದೆದ್ದ, ನರೇಶ್ ಅವರ ಮೂರನೇ ಪತ್ನಿ ರಮ್ಯ ರಘುಪತಿ, ಬೆಂಗಳೂರಿನಲ್ಲಿ ಜನ್ಮ ಜಾಲಾಡಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕಕ್ಕೆ ಬಂದ ನರೇಶ್ ಕನ್ನಡ ಸುದ್ದಿ ವಾಹಿನಿಗಳಿಗೆ ವಿಶೇಷ ಸಂದರ್ಶನ ಕೊಟ್ಟು ಹೋಗಿದ್ದರು. ನನ್ನದೇನೂ ತಪ್ಪಿಲ್ಲ, ರಮ್ಯ ಸರಿಯಲ್ಲ, ಪವಿತ್ರ ದೇವತೆ ಎಂದೆಲ್ಲಾ ಹೇಳಿದ್ದರು.
ಇದೀಗ ಮೈಸೂರಿನ ಹುಣಸೂರು ರಸ್ತೆಯ ಹೋಟೆಲ್ ಒಂದರ ಒಂದೇ ಕೊಠಡಿಯಲ್ಲಿ ಪವಿತ್ರಾ ಲೋಕೇಶ್ ಮತ್ತು ನರೇಶ್ ರೆಡ್ ಹ್ಯಾಂಡ್ ಆಗಿ ರಮ್ಯ ರಘುಪತಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಪತ್ನಿ ಜೀವಂತ ಇರುವಾಗಲೇ, ಆಕೆಗೆ ಡಿವೋರ್ಸ್ ಕೊಡದೆ ನರೇಶ್ ಮತ್ತೊಂದು ಮಹಿಳೆಯ ಜೊತೆಗೆ ಇರುವುದನ್ನು ರಮ್ಯ ರಘುಪತಿ ಅವರೇ ಪತ್ತೆ ಹಚ್ಚಿದ್ದಾರೆ.
ಇನ್ನು ಪೊಲೀಸರ ಭದ್ರತೆಯಲ್ಲಿ ಕೊಠಡಿಯಿಂದ ಹೊರ ಬಂದ ಪವಿತ್ರ ಹಾಗೂ ನರೇಶ್ ಪರಾರಿಯಾಗಿದ್ದಾರೆ. ಈ ವೇಳೆ ನರೇಶ್ ವರ್ತನೆ ಮಾತ್ರ ಅಸಹ್ಯವಾಗಿ ಕಂಡಿದ್ದು ಸುಳ್ಳಲ್ಲ.
Discussion about this post