ತಮಿಳುನಾಡಿನಲ್ಲಿ ಬಸ್ ಹತ್ತುವ ಇವರು ಬೆಂಗಳೂರಿನಿಂದ ಬೈಕ್ ನಲ್ಲಿ ಹೋಗ್ತಾ ಇದ್ರು (dio bike theft)
ಬೆಂಗಳೂರು : ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಬೈಕ್ ಕಳ್ಳರ (dio bike theft) ಮತ್ತೊಂದು ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 26 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ನೆಡುತೆಲಿಯನ್, ತಿರುಪತಿ, ಮತ್ತು ವಲ್ಲರಸ್ಸು ಕಳೆದ ಹಲವು ತಿಂಗಳಿನಿಂದ ಬೈಕ್ ಕಳ್ಳತನ ( dio bike theft )ಕೃತ್ಯದಲ್ಲಿ ತೊಡಗಿದ್ದರು. ಇವರ ಟಾರ್ಗೇಟ್ ಏನಿದ್ರೂ ಡಿಯೋ ಬೈಕ್. ಈ ಸಲುವಾಗಿಯೇ ತಮಿಳುನಾಡಿನಲ್ಲಿ ಬಸ್ ಹತ್ತಿ ಬೆಂಗಳೂರಿಗೆ ಬರುತ್ತಿದ್ದರು. ಇದಾದ ಬಳಿಕ ರಾತ್ರಿ ಹೊತ್ತು ರಸ್ತೆಗಳಲ್ಲಿ ಪಾರ್ಕ್ ಮಾಡಿದ್ದ ಡಿಯೋ ಬೈಕ್ ಗಳ ಮೇಲೆ ಕಣ್ಣು ಹಾಕುತ್ತಿದ್ದರು. ಅದು ಡಿಯೋ ಬೈಕ್ ಮಾತ್ರ.
ಇದನ್ನೂ ಓದಿ : hariram shankar ips ಒಂದೇ ದಿನ 172 ಪೊಲೀಸರನ್ನು ವರ್ಗಾಯಿಸಿದ ಎಸ್ಪಿ ಹರಿರಾಮ್ ಶಂಕರ್
ಬಳಿಕ ಒಬ್ಬ ಬೈಕ್ ಹತ್ತಿರ ಬಂದು ಲಾಕ್ ಮುರಿದು ಹೋಗುತ್ತಿದ್ದ. ಈ ವೇಳೆ ಇಬ್ಬರು ಅಪಾಯವಿದೆಯೇ ಅನ್ನುವುದನ್ನು ನೋಡಿಕೊಳ್ಳುತ್ತಿದ್ದರು. ಇದಕ್ಕಾಗಿ ಎರಡು ಹಂತದ ಎಚ್ಚರಿಕೆ ವಹಿಸುತ್ತಿದ್ದರು. ಲಾಕ್ ಮುರಿಯುತ್ತಿದ್ದಂತೆ ಮತ್ತೊಬ್ಬ ಬಂದು ಬೈಕ್ ಸ್ಟಾರ್ಟ್ ಮಾಡಿ ಮೂವರೊಂದಿಗೆ ಪರಾರಿಯಾಗುತ್ತಿದ್ದರು.
ಹೀಗೆ ಮೂರು ಬೈಕ್ ಗಳನ್ನು ಒಂದೇ ರಾತ್ರಿಯಲ್ಲಿ ಕದ್ದಿಯುತ್ತಿದ್ದ ಇವರು ಬಳಿಕ ನೇರವಾಗಿ ತಮಿಳುನಾಡು ಕಡೆ ಪ್ರಯಾಣ ಬೆಳೆಸುತ್ತಿದ್ದರು. ಅಲ್ಲಿ 10 ರಿಂದ 15 ಸಾವಿರಕ್ಕೆ ಬೈಕ್ ಮಾರಾಟ ಮಾಡಿ ಎಂಜಾಯ್ ಮಾಡ್ತಾ ಇದ್ರು. ಕಾಸು ಮುಗಿದ್ರೆ ಮತ್ತೆ ಬೆಂಗಳೂರಿಗೆ ಪಯಣ.
ಹೀಗೆ ಬೆಂಗಳೂರಿನಲ್ಲಿ ಬೈಕ್ ಕದ್ದು ತಮಿಳುನಾಡು ಕಡೆ ತೆರಳುತ್ತಿದ್ದ ವೇಳೆ ಬೊಮ್ಮಹಳ್ಳಿಯ ಬೀಟ್ ಪೊಲೀಸರು ಎದುರಾಗಿದ್ದಾರೆ. ಪೊಲೀಸರನ್ನು ಕಂಡವರೇ ಯು ಟರ್ನ್ ಹೊಡೆದು ಪರಾರಿಯಾಗಲು ಮುಂದಾಗಿದ್ದಾರೆ. ಅನುಮಾನಗೊಂಡ ಪೊಲೀಸರು ಬೆನ್ನತ್ತಿ ಕೊರಳಪಟ್ಟಿ ಹಿಡಿದಾಗ ಅಸಲಿ ಸತ್ಯ ಹೊರ ಬಿದ್ದಿದೆ.
ಮರದ ದಿಮ್ಮಿಗಳಿದ್ದ ಲಾರಿ ಪಲ್ಟಿ : ಬೈಕ್ ಸವಾರ ಸವಾರ ಸಾವು
ಭಾರೀ ಗಾತ್ರದ ಲಾರಿಗಳು ಸಂಚರಿಸುವ ಸಂದರ್ಭದಲ್ಲಿ ಉಳಿದ ಸವಾರರು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ತುಂಬಾ ಅಗತ್ಯ. ಆದರೆ ಇದು ದುರಾದೃಷ್ಟಕರ ಘಟನೆ
ಬೆಂಗಳೂರು : ನಾಗರಬಾವಿ ರಿಂಗ್ ರೋಡ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮರದ ದಿಮ್ಮಿ ಲೋಡ್ ಮಾಡಿದ್ದ ಲಾರಿ ಪಲ್ಟಿಯಾಗಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆಯಲ್ಲಿ ಮತ್ತೊಬ್ಬ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಲ್ಟಿಯಾಗುತ್ತಿದ್ದಂತೆ ಮರ ದಿಮ್ಮಿಗಳು ಫ್ಲೈ ಓವರ್ ನಿಂದ ಕೆಳಗಡೆ ಹಾರಿದೆ. ಈ ವೇಳೆ ಇಬ್ಬರು ಬೈಕ್ ಸವಾರರ ಮೇಲೆ ದಿಮ್ಮಿ ಬಿದ್ದಿದೆ.ಘಟನೆಯಲ್ಲಿ ತಮಿಳುನಾಡು ಮೂಲಕ ಸುಕೇಶ್ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಮಂಗಳೂರಿನಿಂದ ಈ ಲಾರಿ ಬೆಂಗಳೂರಿಗೆ ಬರುತ್ತಿತ್ತು ಎಂದು ಗೊತ್ತಾಗಿದೆ.
Discussion about this post