ಭಾರೀ ಗಾತ್ರದ ಲಾರಿಗಳು ಸಂಚರಿಸುವ ಸಂದರ್ಭದಲ್ಲಿ ಉಳಿದ ಸವಾರರು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ತುಂಬಾ ಅಗತ್ಯ. ಆದರೆ ಇದು ದುರಾದೃಷ್ಟಕರ ಘಟನೆ -Bangalore Accident
ಬೆಂಗಳೂರು : ನಾಗರಬಾವಿ ರಿಂಗ್ ರೋಡ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮರದ ದಿಮ್ಮಿ ಲೋಡ್ ಮಾಡಿದ್ದ ಲಾರಿ ಪಲ್ಟಿಯಾಗಿ (Bangalore Accident) ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆಯಲ್ಲಿ ಮತ್ತೊಬ್ಬ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಲ್ಟಿಯಾಗುತ್ತಿದ್ದಂತೆ ಮರ ದಿಮ್ಮಿಗಳು ಫ್ಲೈ ಓವರ್ ನಿಂದ ಕೆಳಗಡೆ ಹಾರಿದೆ. (Bangalore Accident) ಈ ವೇಳೆ ಇಬ್ಬರು ಬೈಕ್ ಸವಾರರ ಮೇಲೆ ದಿಮ್ಮಿ ಬಿದ್ದಿದೆ.ಘಟನೆಯಲ್ಲಿ ತಮಿಳುನಾಡು ಮೂಲಕ ಸುಕೇಶ್ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ : veerendra heggade : ಪ್ರಧಾನಿ ನರೇಂದ್ರ ಮೋದಿಗೆ ಧರ್ಮಸ್ಥಳದ ಪ್ರಸಾದ ಕೊಟ್ಟ ವೀರೇಂದ್ರ ಹೆಗ್ಗಡೆ
ಪ್ರಾಥಮಿಕ ಮಾಹಿತಿಗಳ ಪ್ರಕಾರ ಮಂಗಳೂರಿನಿಂದ ಈ ಲಾರಿ ಬೆಂಗಳೂರಿಗೆ ಬರುತ್ತಿತ್ತು ಎಂದು ಗೊತ್ತಾಗಿದೆ.
ಗುಜರಿಯಿಂದ ಕಾರು ತಂದು ಬೆಂಕಿ ಹಚ್ಚಿದ ಕಾಂಗ್ರೆಸ್ ಕಾರ್ಯಕರ್ತರು
ಕ್ರಿಯೇಟಿವಿಟಿ ಅಂದ್ರೆ ಇದಪ್ಪ… ಸುದ್ದಿಯೂ ಆಗಬೇಕು, ನಷ್ಟವೂ ಆಗಬಾರದು.
ಬೆಂಗಳೂರು : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ಮಾಡಿದ್ದನ್ನು ಖಂಡಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಸುಮ್ಮನೆ ಪ್ರತಿಭಟನೆ ಮಾಡಿದ್ರೆ ಅದು ಸುದ್ದಿಯಾಗೋದಿಲ್ಲ, ಡೆಲ್ಲಿಗೆ ನಮ್ಮ ಸಾಧನೆ ತಲುಪೋದಿಲ್ಲ ಎಂದು ಅರಿತ ಕಾಂಗ್ರೆಸ್ ನಾಯಕರು ಸಖತ್ ಐಡಿಯಾ ಮಾಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಗುಜರಿಯಿಂದ ಕಾರು ತಂದು ಮೊದಲೇ ನಿಲ್ಲಿಸಿಕೊಂಡಿದ್ದ ಕಾರ್ಯಕರ್ತರು ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆ ಕಾರಿನ ಟಯರ್ ಗೆ ಬೆಂಕಿ ಹಚ್ಚಿದ್ದಾರೆ. ಒಂದು ಕ್ಷಣಕ್ಕೆ ಎಲ್ಲರೂ ಗಾಬರಿಯಾಗಿದ್ದಾರೆ. ಪೊಲೀಸರು ಕೂಡಾ ಗಾಬರಿಯಾಗಿದ್ದಾರೆ. ಸಣ್ಣದಾಗಿ ಪ್ರತಿಭಟನೆ ಮಾಡಿ ಮುಗಿಸುತ್ತೇವೆ ಅಂದವರು ಅನಾಹುತ ಮಾಡಿದ್ರಲ್ಲ ಎಂದು. ತಕ್ಷಣ ಅಗ್ನಿಶಾಮಕದಳದವರನ್ನು ಕರೆಸಿ ಬೆಂಕಿ ನಂದಿಸಿ ಅನಾಹುತವನ್ನು ತಪ್ಪಿಸಿದ್ದಾರೆ. ನಂತರ ಇದು ಗುಜರಿಯಿಂದ ತಂದ ಕಾರು ಎಂದು ಗೊತ್ತಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ಪ್ರಚಾರದ ಹುಚ್ಚಿನಿಂದ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ನಡೆಸಿದ್ದು ಮಾತ್ರ ಅಪರಾಧ. ರಸ್ತೆಯಲ್ಲಿ ಬದಿಯಲ್ಲಿ ಕಾರು ಸುಟ್ಟ ಕಾರಣದಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ಅಷ್ಟು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಕಾರು ಸುಟ್ರಂತೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಬೆಂಕಿ ಹಚ್ಚಲು ಪ್ರೇರಪಣೆ ನೀಡಿದಂತಾಗುತ್ತದೆ.
ಒಟ್ಟಿನಲ್ಲಿ ಕಾಂಗ್ರೆಸ್ ನ ಮಿನಿ ನಾಯಕರ ಇಂತಹ ವರ್ತನೆಗಳೇ ಪಕ್ಷವನ್ನು ಸೋಲಿಸಲು ಮುನ್ನುಡಿ ಬರೆಯುತ್ತದೆ ಅನ್ನುವುದು ಸತ್ಯ
Discussion about this post