ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಸುಟ್ಟು ಅರೆಬೆಂದ ಸ್ಥಿತಿಯಲ್ಲಿ ಸಿಕ್ಕ ಮಹಿಳೆ ಶವ ಪೊಲೀಸರ ತಲೆ ನೋವಿಗೆ ಕಾರಣವಾಗಿದ್ದು. ಮೃತ ಮಹಿಳೆಯ ( police investigation ) ಗುರುತು ಮತ್ತು ಕೊಲೆಗಾರರನ್ನು ಪತ್ತೆ ಹಚ್ಚಿದ್ದೆ ಒಂದು ರೋಚಕ ಕಥೆ
ಬೆಂಗಳೂರು : ಕೆಂಗೇರಿ ಸಮೀಪದ ರಾಮಸಂದ್ರ ಪ್ರದೇಶದಲ್ಲಿ ಜುಲೈ 3 ರಂದು ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಶವ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ಇದೊಂದು ಕೊಲೆ ಅನ್ನುವುದು ಶವ ನೋಡಿದಾಗಲೇ ಗೊತ್ತಾಗಿತ್ತು. ( police investigation ) ಆದರೆ ಆಕೆ ಯಾರು, ಕೊಲೆ ಮಾಡಿದ್ದು ಯಾರು ಅನ್ನುವುದಕ್ಕೆ ಸುಳಿವು ಇರಲಿಲ್ಲ.
ಹಾಗಂತ ಕೆಂಗೇರಿ ಪೊಲೀಸರು ಸುಮ್ಮನಾಗಲಿಲ್ಲ. ರಾಜ್ಯದ ಠಾಣೆಗಳಲ್ಲಿ ಕಾಣೆಯಾದವರ ವಿವರಗಳನ್ನು ಪರಿಶೀಲನೆ ನಡೆಸಿದ್ರೆ ಮೃತಪಟ್ಟವಳೊಂದಿಗೆ ಯಾವ ಹೋಲಿಕೆ ಪ್ರಕರಣಗಳು ಸಿಗಲಿಲ್ಲ. ಇದಾದ ಬಳಿಕ ಸುತ್ತಮುತ್ತಲಿನ ಮಹಿಳಾ ಪಿಜಿ,ಕಾಲೇಜು ಹಾಸ್ಟೆಲ್ ಖಾಸಗಿ ಕಂಪನಿಗಳಿಗೆ ಹೋದ ಪೊಲೀಸರು ಅಲ್ಲಿ ಕಾಣೆಯಾದವರ ವಿವರ ಸಿಗಬಹುದೇ ಎಂದು ನೋಡಿದ್ದಾರೆ. ಆಗ ಮೂರು ಮಹಿಳೆಯರು ಯಾರಿಗೂ ಹೇಳದೆ ಕೆಲಸಕ್ಕೆ ಬಾರದೇ ಇರುವುದು ಗೊತ್ತಾಗಿದೆ. ಆ ಪೈಕಿ ಇಬ್ಬರು ಮಹಿಳೆಯರು ಸಂಪರ್ಕಕ್ಕೆ ಸಿಕ್ರೆ ನಗೀನಾ ಅನ್ನುವ ಮಹಿಳೆಯ ಫೋನ್ ಸ್ವಿಚ್ ಆಫ್ ಆಗಿತ್ತು.
ಇದನ್ನೂ ಓದಿ : actor shivaranjan : ಶೃತಿ ಜೊತೆ ನಟಿಸಿದ್ದ ನಟನ ಮೇಲೆ ಗುಂಡಿನ ದಾಳಿ : ಅಪಾಯದಿಂದ ಪಾರಾದ ಶಿವರಂಜನ್
ಅನುಮಾನಗೊಂಡ ಪೊಲೀಸರು ಈ ಮೊಬೈಲ್ ಸಂಖ್ಯೆ ಬೆನ್ನು ಹತ್ತಿದ್ದಾರೆ. ಆಗ ತನಿಖೆ ನಡೆಸಲು ಪೊಲೀಸರಿಗೆ ಒಂದು ಐಡಿಯಾ, ಒಂದು ಏರಿಯಾ ಗೊತ್ತಾಗಿದೆ. ಹೀಗಾಗಿ ರಾಮಸಂದ್ರ ವ್ಯಾಪ್ತಿಯ ಸಿಸಿ ಕ್ಯಾಮಾರ ಮತ್ತು ಪೆಟ್ರೋಲ್ ಬಂಕ್ ಪರಿಶೀಲನೆಗೆ ಮುಂದಾಗಿದ್ದಾರೆ. ಆಗ ಒಂದು ಕಾರು ಮತ್ತು ಸ್ಕೂಟರ್ ಸಂಚಾರ ಅನುಮಾನ ಮೂಡಿಸಿತ್ತು.
ಜೊತೆಗೆ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಖರೀದಿಸಿದ ಇಬ್ಬರು ವ್ಯಕ್ತಿಗಳ ನಡೆ ಅನುಮಾನ ಹುಟ್ಟಿಸಿತ್ತು. ಹೀಗಾಗಿ ಕ್ಯಾಪ್ ಧರಿಸಿದ ಇಬ್ಬರ ಸಲುವಾಗಿ ಹತ್ತಾರು ಸಿಸಿಟಿವಿ ದೃಶ್ಯ ತೆಗೆದ್ರೆ ಇವರಿಬ್ಬರು ಬಾರ್ ನಲ್ಲಿ ಮದ್ಯ ಖರೀದಿಸಿರುವುದು ಗೊತ್ತಾಗಿದೆ. ಹೀಗಾಗಿ ಬಾರ್ ನಲ್ಲಿ ಪರಿಶೀಲನೆ ಮಾಡಿದಾಗ ಅವರು ಮದ್ಯಕ್ಕಾಗಿ ಫೋನ್ ಪೇ ನಲ್ಲಿ ಹಣ ಪಾವತಿಸಿದ್ದರು.
ಆ ಫೋನ್ ಪೇ ನಂಬರ್ ಹಾಗೂ ಕೆಲಸಕ್ಕೆ ಗೈರಾಗಿದ್ದ ನಗೀನಾ ಮೊಬೈಲ್ ನಡುವೆ ಹಲವು ಸಲ ಕರೆಗಳ ವಿನಿಮಯವಾಗಿತ್ತು. ಹೀಗಾಗಿ ಇದೇ ಆಧಾರದಲ್ಲಿ ನಗೀನಾ ವಾಸವಿದ್ದ ಕೆಂಗೇರಿ ಉಪನಗರದ ಸನ್ ಸಿಟಿಯ ಮನೆ ಬಳಿ ಹೋದ್ರೆ ದಂಪತಿ ನಾಪತ್ತೆಯಾಗಿರುವ ವಿಷಯ ಗೊತ್ತಾಗಿದೆ.
ಅದಾದ ಬಳಿಕ ನಗೀನಾ ಪೋಷಕರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅವರಿಗೆ ಶವ ತೋರಿಸಿದಾಗ ಇದು ನಗೀನಾ ಶವ ಅನ್ನುವುದನ್ನು ಬೆರಳಲ್ಲಿದ್ದ ಎರಡು ಉಂಗುರಗಳ ಮೂಲಕ ಪತ್ತೆ ಹಚ್ಚಿದ್ದಾರೆ. ಹೇಗೋ ಶವ ಯಾರದ್ದು ಎಂದು ಗೊತ್ತಾಯ್ತು. ಕೊಲೆ ಮಾಡಿದವರು ಯಾರು ಅನ್ನುವುದನ್ನು ಪತ್ತೆ ಹಚ್ಚುವುದೇ ಟಾಸ್ಕ್ ಆಗಿತ್ತು.
ಸಣ್ಣದೊಂದು ಅನುಮಾನದ ಹಿನ್ನಲೆಯಲ್ಲಿ ನಗೀನಾ ಪತಿ ಮೊಹಮ್ಮದ್ ಮಂಜೂರ್ ನನ್ನು ಬೆಂಡಿತ್ತಿದಾಗ, ಹೌದು ನಾನೇ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆಗೇನು ಕಾರಣ…?
ಯಾದಗಿರಿ ಜಿಲ್ಲೆಯ ಮೊಹಮ್ಮದ್ ಮಂಜೂರ್ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಈ ವೇಳೆ ನಗೀನಾ ಖಾನಂಳ ಪರಿಚಯವಾಗಿದೆ. ಇದಾದ ಬಳಿಕ ಇಬ್ಬರೂ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ. ಮೊದಲ ಗಂಡನಿಂದ ಜನಿಸಿದ್ದ ಇಬ್ಬರು ಮಕ್ಕಳ ಪೈಕಿ ಒಂದು ಮಗು ತಂದೆಯ ಜೊತೆಗಿದ್ದರೆ ಮತ್ತೊಂದು ಮಗು ನಗೀನಾ ಜೊತೆಗಿತ್ತು. ನಗೀನಾ ಖಾಸಗಿ ಕಂಪನಿಯೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಹೋಗುತ್ತಿದ್ರೆ, ಮೊಹಮ್ಮದ್ ಜೆಸಿಬಿ ಚಾಲಕನಾಗಿದ್ದ.
ಈ ನಡುವೆ ನಗೀನಾಳಿಗೆ ಅಕ್ರಮ ಸಂಬಂಧವಿದೆ ಅನ್ನುವ ಅನುಮಾನ ಮೊಹಮ್ಮದ್ ಗೆ ಬಂದಿದೆ. ಹೀಗಾಗಿ ನಿತ್ಯ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಅದೊಂದು ಸಲ ನನ್ನ ಹೆಂಡತಿ ಸರಿ ಇಲ್ಲ, ಆಕೆಯನ್ನು ಕೊಲೆ ಮಾಡಬೇಕು ಎಂದು ಸ್ವೇಹಿತ ಪ್ರಜ್ವಲ್ ಬಳಿ ಹೇಳಿದ್ದ. ಈ ಕೊಲೆಗೆ ಪ್ರಜ್ವಲ್ ಕೂಡಾ ಸಾಥ್ ಕೊಟ್ಟಿದ್ದ.
ಜುಲೈ 1 ರ ರಾತ್ರಿ ನಗೀನಾಗೆ ಕರೆ ಮಾಡಿದ್ದ ಮೊಹಮ್ಮದ್ ತಾನು ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಕುಡಿದು ಬಿದ್ದಿರೋದಾಗಿ ಹೇಳಿದ್ದ. ಹೀಗಾಗಿ ಪತಿಯನ್ನು ಕರೆ ತರಲು ನಗೀನಾ ದ್ವಿಚಕ್ರ ವಾಹನದಲ್ಲಿ ಹೋಗಿದ್ದಾಳೆ. ನಗೀನಾ ಬಂದ ವೇಳೆ ಹೆಂಡತಿ ಜೊತೆಗೆ ಗಲಾಟೆ ಮಾಡಿದ ಮೊಹಮ್ಮದ್ , ಹಲ್ಲೆ ಮಾಡಿದ್ದಾನೆ. ಈ ವೇಳೆ ಪ್ರಜ್ವಲ್ ಜೊತೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಇದಾದ ಬಳಿಕ ನಗೀನಾ ಬಂದಿದ್ದ ಸ್ಕೂಟರ್ ನಲ್ಲೇ ಹೋಗಿ ಪೆಟ್ರೋಲ್ ತಂದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇದೀಗ ಪ್ರಜ್ವಲ್ ಹಾಗೂ ಮೊಹಮ್ಮದ್ ನನ್ನು ಪೊಲೀಸರು ಬಂಧಿಸಿದ್ದಾರೆ,
Discussion about this post