ವಕೀಲರ ಪತ್ನಿಗೆ ಕಿರುಕುಳ ನೀಡಲು ಹೋದ ವ್ಯಕ್ತಿಯೊಬ್ಬ ತನ್ನ ಗೆಳೆಯನ ಸಾವಿಗೆ ಪರೋಕ್ಷವಾಗಿ ಕಾರಣನಾದನೇ..?
ಬೆಂಗಳೂರು : ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರ ಕೊಲೆ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ವಕೀಲರೊಬ್ಬರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಉದ್ದೇಶಪೂರ್ವಕವಲ್ಲದ ಕೊಲೆ ಅನ್ನುವ ವಾದಕ್ಕೆ ಹೈಕೋರ್ಟ್ ಪುರಸ್ಕಾರ ನೀಡಿ ಜಾಮೀನು ಮಂಜೂರು ಮಾಡಿದೆ.
ನಗರದ ವಕೀಲ ಮಹೇಂದ್ರ ಅವರು ಪತ್ನಿ ಹಾಗೂ ಎರಡು ವರ್ಷದ ಪುತ್ರನ ಜೊತೆಗೆ ಚಂದಾಪುರದ ಜೆಪಿಆರ್ ಲೇ ಜೌಟ್ ನಲ್ಲಿ ವಾಸವಾಗಿದ್ದರು. ಇದೇ ಸಮಯದಲ್ಲಿ ಮನೆ ಮಾಲೀಕನ ಮಗ ಸಂತೋಷ್ ಕುಮಾರ್ ಎಂಬಾತ ಮಹೇಂದ್ರ ಅವರ ಪತ್ನಿಯ ಜೊತೆಗೆ ಸಲುಗೆ ಬೆಳೆಸಲು ಬಯಸಿದ್ದ. ಜೊತೆಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮಹೇಂದ್ರ ಪತ್ನಿಯ ಜೊತೆಗೆ ಈ ಮನೆ ತ್ಯಜಿಸಿ ಬೇರೆ ಕಡೆ ಮನೆ ಮಾಡಿಕೊಂಡಿದ್ದರು.
ಈ ನಡುವೆ ಓದಿನ ಸಲುವಾಗಿ ಫ್ರಾನ್ಸ್ ಗೆ ತೆರಳಿದ್ದ ಸಂತೋಷ್ 2022ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿಗೆ ಮರಳಿದ್ದಾನೆ. ಎಲ್ಲವನ್ನೂ ಮರೆತು ಸುಮ್ಮನಿದ್ರೆ ಪರವಾಗಿರಲಿಲ್ಲ. ಮತ್ತೆ ಮಹೇಂದ್ರ ಅವರ ಪತ್ನಿಯನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾನೆ. ಇದೇ ಉದ್ದೇಶಕ್ಕಾಗಿ ಗೆಳೆಯ ಸಾಫ್ಟ್ ವೇರ್ ಇಂಜಿನಿಯರ್ ಅರುಣ್ ಜೊತೆಗೆ 2022ರ ಏಪ್ರಿಲ್ 13 ರಂದು ಎಚ್.ಎಸ್.ಆರ್ ಠಾಣಾ ವ್ಯಾಪ್ತಿಯಲ್ಲಿದ್ದ ಮಹೇಂದ್ರ ಮನೆಗೆ ಬಂದಿದ್ದಾನೆ.
ಇದಕ್ಕೂ ಮುನ್ನ ಇದೇ ಪ್ರಕರಣ ಸ್ಠಳೀಯ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿತ್ತು. ಠಾಣೆಯಲ್ಲಿ ಸಂತೋಷ್ ಗೆ ಪೊಲೀಸರು ಎಚ್ಚರಿಕೆ ನೀಡಿ, ಮಹೇಂದ್ರ ಅವರಿಗೆ ಪತ್ನಿಗೆ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದರು. ಆದರೆ ಪೊಲೀಸರ ಎಚ್ಚರಿಕೆಯನ್ನು ಸಂತೋಷ್ ಕಡೆಗಣಿಸಿದ್ದ.
ಈ ವೇಳೆ ಮಹೇಂದ್ರ ಅವರು ಅರುಣ್ ಗೆ ಚಾಕುವಿನಿಂದ ಇರಿದಿದ್ದಾರೆ ಅನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ಅರುಣ್ ಚಿಕಿತ್ಸೆಗಾಗಿ ಕ್ಯಾಂಬೆಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೆಲವೇ ದಿನಗಳಲ್ಲಿ ಅರುಣ್ ಮೃತಪಟ್ಟಿದ್ದಾನೆ. ಇದೇ ಘಟನೆಯಲ್ಲಿ ಗಾಯಗೊಂಡಿದ್ದ ಸಂತೋಷ್ ಗುಣಮುಖನಾಗಿ, ಮಹೇಂದ್ರ ವಿರುದ್ಧ ಕೊಲೆ ಆರೋಪದ ದೂರು ದಾಖಲಿಸಿದ್ದ. ಈ ವೇಳೆ ದೂರು ದಾಖಲಿಸಿಕೊಂಡ ಪೊಲೀಸರು ಅರುಣ್ ನನ್ನು ಬಂಧಿಸಿದ್ದರು.
ಇದಾದ ಬಳಿಕ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಹೀಗಾಗಿ ಮಹೇಂದ್ರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು., ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಪಿ. ಮೊಹಮ್ಮದ್ ನವಾಜ್, ಮಹೇಂದ್ರ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಹೈಕೋರ್ಟ್ ನಲ್ಲಿ ಮಹೇಂದ್ರ ಪರವಾಗಿ ವಾದ ಮಂಡಿಸಿದ ಪವನ ಚಂದ್ರ ಶೆಟ್ಟಿ, ಇದೊಂದು ಉದ್ದೇಶಪೂರ್ವಕವಲ್ಲ ಕೊಲೆ, ತನ್ನ ಕಕ್ಷಿದಾರರ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದು ಮಾತ್ರವಲ್ಲದೆ, ಹಲ್ಲೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಮಹೇಂದ್ರ ಅವರು ಸ್ವಯಂ ರಕ್ಷಣೆಗೆ ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ. ಜೊತೆಗೆ ಸಂತೋಷ್ ಮಹೇಂದ್ರ ಅವರಿಗೆ ಪತ್ನಿಗೆ ಕಿರುಕುಳ ನೀಡಿರುವ ಬಗ್ಗೆಯೂ ವಿವರಿಸಿದ್ದಾರೆ.
Discussion about this post