ಮನೆ ಹತ್ರ ಬಂದು ನೋಡಿದಾಗ ಮನೆ ಲಾಕ್ ಆಗಿತ್ತು. ಅಲ್ಲದೆ, ಕೆಟ್ಟ ವಾಸನೆ ಬರ್ತಿತ್ತು. ಬಾಗಿಲು ಓಪನ್ ಮಾಡಿ ನೋಡಿದಾಗ ಮನೆಯಲ್ಲಿ ತಂಗಿ ವನಜಾಕ್ಷಿ ದೇಹ ಕೊಳೆತ ಸ್ಥಿತಿಯಲ್ಲಿತ್ತು
ಬೆಂಗಳೂರು : ಹೆಂಡತಿ ಸದಾ ಮೊಬೈಲ್ ನಲ್ಲಿ ಮಾತನಾಡುತ್ತಾಳೆ ಎಂದು ಶೀಲ ಶಂಕಿಸಿ ತನ್ನ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಗರದ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದವರನ್ನು ಕಾವೇರಿಪುರ 13ನೇ ಅಡ್ಡರಸ್ತೆಯ ವನಜಾಕ್ಷಿ ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ಕೊಲೆಗಾರ ಪತಿ ಅಶೋಕ್ ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
13 ವರ್ಷಗಳ ಹಿಂದೆ ಕುಣಿಗಲ್ ತಾಲೂಕಿನ ಕುಣಿಗಲ್ ಹುಲಿಯೂರು ದುರ್ಗಾ ಹೋಬಳಿಯ ಕೆಂಚೇನಹಳ್ಳಿ ಗ್ರಾಮದ ಅಶೋಕ್ ಮತ್ತು ವನಜಾಕ್ಷಿ ವಿವಾಹ ನಡೆದಿತ್ತು. ಈ ದಂಪತಿಗೆ ಮೂರು ಮಕ್ಕಳಿದ್ದು, ಕ್ಯಾಬ್ ಚಾಲಕನಾಗಿರುವ ಅಶೋಕ್ ಕುಟುಂಬ ಸಮೇತರಾಗಿ ಕಾವೇರಿಪುರದಲ್ಲಿ ವಾಸವಾಗಿದ್ದರು. ವನಜಾಕ್ಷಿ ಮನೆ ಸಮೀಪದ ಗಾರ್ಮೆಂಟ್ಸ್ ನಲ್ಲಿ ವಾಸವಾಗಿದ್ದರು.
ಈ ನಡುವೆ ಮೊಬೈಲ್ ಮಾತುಕತೆ ವಿಚಾರವಾಗಿ ಭಾನುವಾರ ದಂಪತಿ ಮಧ್ಯೆ ಜಗಳವಾಗಿದೆ. ಪತ್ನಿ ಸದಾ ಮೊಬೈಲ್ ನಲ್ಲೇ ಮಾತನಾಡುತ್ತಿರುತ್ತಾಳೆ ಅನ್ನುವುದು ಅಶೋಕ್ ಆಕ್ಷೇಪವಾಗಿತ್ತು. ಭಾನುವಾರ ರಾತ್ರಿ 9.45ರ ಸುಮಾರಿಗೆ ಅಶೋಕ್ ಮನೆಗೆ ಬಂದಾಗ ವನಜಾಕ್ಷಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳು. ಯಾರೊಂದಿಗೆ ಮಾತನಾಡುತ್ತಿರುವುದು ಎಂದು ಕೇಳಿದಾಗ, ವನಜಾಕ್ಷಿ ಕೋಪದಿಂದ ಉತ್ತರಿಸಿದ್ದಾಳೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಶೋಕ್ ಪತ್ನಿಯ ಕೆನ್ನೆಗೆ ಬಾರಿಸಿದ್ದಾನೆ. ಇದರಿಂದ ಕೆರಳಿದ ವನಜಾಕ್ಷಿ ಅಡುಗೆ ಮನೆಯಿಂದ ಹಿಟ್ಟಿನ ಕೋಲು ತಂದು ಪತಿಗೆ ಬಾರಿಸಲು ಮುಂದಾಗಿದ್ದಾಳೆ. ತಕ್ಷಣ ಕೋಲು ಕಸಿದುಕೊಂಡ ಅಶೋಕ್ ಪತ್ನಿಗೆ ಬಾರಿಸಿ, ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಇತ್ತ ಸೋಮವಾರದಿಂದ ತಂದೆ ಮತ್ತು ತಾಯಿಗೆ ಊರಿನಲ್ಲಿದ್ದ ಮಕ್ಕಳು ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಅನುಮಾನಗೊಂಡ ವನಜಾಕ್ಷಿ ಸಹೋದರ, ಅಕ್ಕನ ಮನೆಗೆ ಬಂದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮೊಬೈಲ್ ಕರೆ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ
Discussion about this post