ಮುಂಬೈ : ನವಿ ಮುಂಬೈನ ತುರ್ಭೆ MIDC ಪ್ರದೇಶದ BMW ಶೋರೂಂ ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಗೋದಾಮಿನಲ್ಲಿದ್ದ 40 ರಿಂದ 45 BMW ಕಾರುಗಳು ಭಸ್ಮವಾಗಿವೆ.
ಮಂಗಳವಾರ ಮುಂಜಾನೆ 5.30ರ ಸುಮಾರಿಗೆ BMW ಕಾರುಗಳ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಹತ್ತು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯ್ತು ಎಂದು ಅಗ್ನಿಶಾಮಕ ದಳದ ಆರ್.ಬಿ.ಪಾಟೀಲ್ ತಿಳಿಸಿದ್ದಾರೆ.
Discussion about this post