ಉತ್ತರ ಪ್ರದೇಶ : ಕಿಕ್ಕರಿದ ಮಾರುಕಟ್ಟೆ ಪ್ರದೇಶದಲ್ಲಿ ಸಾವಿರಾರು ಜನರ ಮುಂದೆಯೇ ಆಭರಣ ವ್ಯಾಪಾರಿಯೊಬ್ಬರನ್ನು ಕತ್ತು ಸೀಳಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಸಹರಾಪುರ ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರ ಈ ಘಟನೆ ಸಂಭವಿಸಿದ್ದು, ಕೊಲೆಯ ಪ್ರತಿಯೊಂದು ಕ್ಷಣವೂ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಬೆಚ್ಚಿಬೀಳಿಸುವಂತಿದೆ.ಮೃತ ವ್ಯಕ್ತಿಯನ್ನು 32 ವರ್ಷದ ಶೌಕತ್ ಅಲಿ ಎಂದು ಗುರುತಿಸಲಾಗಿದೆ.ವೈರಲ್ ಆದ ವಿಡಿಯೋ ಪ್ರಕಾರ ಆರೋಪಿ ಹರೂನ್ ಅಹಮದ್ ಖಾನ್ ಎಂಬಾತ ಅಲಿಯ ಬಳಿಗೆ ಬರುತ್ತಾನೆ. ಈ ವೇಳೆ ಏಕಾಏಕಿ ಆಲಿಯತ್ತ ನುಗ್ಗಿದ ಖಾನ್ ಚಾಕುವಿನಿಂದ ಕತ್ತನ್ನು ಪದೇ ಪದೇ ಸೀಳಿದ್ದಾನೆ.
ಮತ್ತೊಂದು ವಿಡಿಯೋದಲ್ಲಿ ಆಟೋ ಚಾಲಕನೊಬ್ಬ ಈ ಘಟನೆಯನ್ನು ಗಮನಿಸುತ್ತಿರುತ್ತಾನೆ. ಯಾವಾಗ ಕತ್ತು ಸೀಳುವುದು ಕಾಣಿಸುತ್ತದೋ ಆಟೋ ಚಾಲಕ ಅಲ್ಲಿಂದ ಪರಾರಿಯಾಗುತ್ತಾನೆ. ಇದೇ ಕ್ಷಣ ಅಂಗಡಿ ಮಾಲೀಕನೊಬ್ಬ ತನ್ನ ಅಂಗಡಿಯ ಶಟರ್ ಎಳೆಯುವ ದೃಶ್ಯವೂ ದಾಖಲಾಗಿದೆ.
ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹರೂನ್ ಪತ್ನಿಯೊಂದಿಗೆ ಶೌಕತ್ ಆಲಿ ಅನೈತಿಕ ಸಂಬಂಧ ಹೊಂದಿದ್ದ. ಅದೆಷ್ಟು ಸಲ ಎಚ್ಚರಿಕೆ ಕೊಟ್ಟರೂ ಸಂಸಾರದಲ್ಲಿ ಹುಳಿ ಹಿಂಡುವ ಕಾರ್ಯ ನಿಲ್ಲಿಸಿರಲಿಲ್ಲ. ಹೀಗಾಗಿ ಕೊಲೆ ಮಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Discussion about this post