ಜೈಪುರ : 19 ವರ್ಷದ ಯುವತಿಯೊಬ್ಬಳಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಶ್ಯಾಮ್ ನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ದೂರು ನೀಡಿದ್ದು, ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಅಂದಿದ್ದಾಳೆ.
ಯುವತಿಯ ದೂರಿನ ಪ್ರಕಾರ ಈ ಘಟನೆ 9 ದಿನಗಳ ಹಿಂದೆ ನಡೆದಿದ್ದು, ನಗರದ ಹೊರವಲಯಕ್ಕೆ ನನ್ನ ಕರೆದುಕೊಂಡು ಹೋದ 5 ಮಂದಿ ಮಾದಕ ವಸ್ತು ನೀಡಿ ಅತ್ಯಾಚಾರ ಎಸಗಲಾಗಿದೆಯಂತೆ. ಯುವತಿಯ ದೂರು ಸ್ವೀಕರಿಸಿರುವ ಜೈಪುರ ಶ್ಯಾಮ್ ನಗರ ಪೊಲೀಸರು ಪ್ರಕರಣ ದಾಖಲಿಸಿ, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
5 ಆರೋಪಿತ ಅತ್ಯಾಚಾರಿಗಳ ಪೈಕಿ ಒಬ್ಬ ಯುವತಿಗೆ ಪರಿಚಯವಿದ್ದ ಎನ್ನಲಾಗಿದೆ.
Discussion about this post