ಬೀದರ್ : ಈಜಲು ಹೋದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ನ ಘೋಡವಾಡಿಯ ದರ್ಗಾದ ಕೆರೆಯಲ್ಲಿ ನಡೆದಿದೆ.
ಮೃತರನ್ನು ಮೊಹಮ್ಮದ್ ಜುಲೇದ್ (19), ಸಲೀಂ ಖಾನ್ (18), ಆಕ್ಬರ್ ಸೈಯದ್ ( 17), ಸೈಯದ್ (15) ಎಂದು ಗುರುತಿಸಲಾಗಿದೆ.
ಹೈದರಬಾದ್ ನಿಂದ ಬೀದರ್ ಗೆ ದರ್ಗಾ ನೋಡಲೆಂದು ಪೂರ್ತಿ ಕುಟುಂಬ ಆಗಮಿಸಿತ್ತು. ಈ ವೇಳೆ ಕುಟುಂಬದ ಸದಸ್ಯರು ಈಜಲು ಕೆರೆಗೆ ಇಳಿದಿದ್ದಾರೆ. ಈ ವೇಳೆ ನೀರಿನ ಆಳ ತಿಳಿಯದೆ ಬಾಲಕರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು ಶವಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Discussion about this post