ಚಿಕ್ಕಮಗಳೂರು : ಬೈಕಿನ ಹೆಡ್ ಲೈಟ್ ಡಿಮ್ ಡಿಪ್ ಮಾಡಿಲ್ಲ ಅನ್ನೋ ಕಾರಣಕ್ಕೆ ಯುವಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ.
ಪ್ರದೀಪ್ ಹಾಗೂ ನಿತಿನ್ ಅನ್ನುವವರು ಗುಣವಂತೆ ಸಮೀಪದ ಗ್ರಾಮಕ್ಕೆ ವಾಷಿಂಗ್ ಮಷಿನ್ ರಿಪೇರಿ ಕೆಲಸಕ್ಕೆಂದು ಹೋಗಿ ಹಿಂತಿರುಗುತ್ತಿದ್ದರು. ಈ ವೇಳೆ ಮಕ್ಕಿಮನೆ ಮಾರ್ಗವಾಗಿ ಬರುವಾಗ ಅಡ್ಡ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು, ಕ್ಷುಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ.
ಹಲ್ಲೆಕೋರರಾದ ಹರಂದೂರು ಗ್ರಾಮ ಪಂಚಾಯತಿ ಸದಸ್ಯ ಚೇತನ್, ಮಂಜು, ಪವನ್, ಹರೀಶ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಹಲ್ಲೆಗೊಳಗಾದವರು ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Discussion about this post