ಬೆಂಗಳೂರು : ಇದೊಂದು ವಿಚಿತ್ರ ಘಟನೆ ಅಂದರೂ ತಪ್ಪಿಲ್ಲ. ಅಪರೂಪದಲ್ಲಿ ಅಪರೂಪ ಅನ್ನುವ ಘಟನೆ ಅಂದರೂ ತಪ್ಪಿಲ್ಲ. ಕುಮಾರ್ ಮತ್ತು ಜ್ಯೋತಿ ದಂಪತಿಯ ಏಕೈಕ ಪುತ್ರಿ ಜೀವಿಕಾ (6) ಬೆಂಗಳೂರಿನಿಂದ ತಮ್ಮ ಅಜ್ಜಿ ಗೌರಮ್ಮ ಹಾಗೂ ಚಿಕ್ಕಪ್ಪ ಯೋಗೇಶ್ ಜೊತೆಗೆ ಮಂಡ್ಯ ಜಿಲ್ಲೆ ಮದ್ದೂರಿಗೆ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಲುವಾಗಿ ಬುಧವಾರ ಬೆಳಿಗ್ಗೆ ಸುಂಕದಕಟ್ಟೆಯಲ್ಲಿ ಖಾಸಗಿ ಬಸ್ ಹತ್ತಿದ್ದರು.
ಬಾಲಕಿ ಬಸ್ ಇಂಜಿನ್ ಪಕ್ಕದಲ್ಲಿದ್ದ ಸೀಟಿನಲ್ಲಿ ಕುಳಿತುಕೊಂಡಿದ್ದಳು. ಬೆಳಿಗ್ಗೆ 11.30 ರ ಸುಮಾರಿಗೆ ಬೆಂಗಳೂರು-ಮಾಗಡಿ ರಸ್ತೆಯ ಕಸಬಾ ಹೋಬಳಿಯ ಹೊನ್ನಾಪುರ ಗ್ರಾಮದ ಬಳಿ ಬಸ್ ತೆರಳುತ್ತಿದ್ದ ವೇಳೆ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ.
ಈ ರಭಸಕ್ಕೆ ಬಾಲಕಿ ಬಸ್ ಮುಂದಿನ ಗಾಜು ಓಡೆದು ಹೊರ ಚಿಮ್ಮಿದ್ದಾಳೆ ಮಾತ್ರವಲ್ಲದೆ ಬಸ್ ಚಕ್ರಕ್ಕೆ ಸಿಲುಕಿ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಈ ಘಟನೆಯಿಂದ ಪೋಷಕರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಎಲ್ಲಾ ಬಸ್ ಚಾಲಕರು ಒಳ್ಳೆಯ ಚಾಲಕರಾಗಿರುವುದಿಲ್ಲ. ಹೀಗಾಗಿ ಮಕ್ಕಳನ್ನು ಬಸ್ ಸೇರಿದಂತೆ ವಾಹನಗಳಲ್ಲಿ ಕೂರಿಸುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು
Discussion about this post