ಮುಂಬೈ : ನೀಲಿ ಸಿನಿಮಾಗಳನ್ನು ಚಿತ್ರೀಕರಿಸಿ ಅದನ್ನು ವಿವಿಧ APP ಗಳಿಗೆ ಅಪ್ಲೋಡ್ ಮಾಡುತ್ತಿದ್ದ ಆರೋಪದ ಹಿನ್ನಲೆಯಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನಾವು ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದೇವೆ. ಇಡೀ ಪ್ರಕರಣದ ರೂವಾರಿ ಅವರಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಏನನ್ನೂ ಹೇಳುವುದಿಲ್ಲ, ತನಿಖೆ ಪ್ರಗತಿಯಲ್ಲಿದೆ. ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ನೀಲಿ ಸಿನಿಮಾ ತಯಾರಿಕೆ ಜಾಲ ಸಕ್ರಿಯವಾಗಿರುವ ಕುರಿತಂತೆ ಫೆಬ್ರವರಿಯಲ್ಲಿ ದೂರೊಂದು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಇದೀಗ ರಾಜ್ ಕುಂದ್ರಾ ಬುಡಕ್ಕೆ ಕೈ ಹಾಕಿದ್ದಾರೆ. ನೀಲಿ ಚಿತ್ರ ದಂಧೆಯಲ್ಲಿ ಕುಂದ್ರಾ ಕೈವಾಡ ಕುರಿತಂತೆ ಮುಂಬೈ ಪೊಲೀಸರಿಗೆ ಸಾಕ್ಷ್ಯ ದೊರಕಿದೆ ಎನ್ನಲಾಗಿದೆ.
ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ಕುಂದ್ರಾ 2009ರಲ್ಲಿ ಮದುವೆಯಾಗಿದ್ದರು. ಇದಾದ ಬಳಿಕ ಒಂದಲ್ಲ ಒಂದು ವಿವಾದಕ್ಕೆ ದಂಪತಿಗಳು ಸಿಲುಕುತ್ತಲೇ ಬಂದಿದ್ದಾರೆ. ಕೆಲ ವಾರಗಳ ಹಿಂದಷ್ಟೇ ಕುಂದ್ರಾ ಅವರ ಮಾಜಿ ಪತ್ನಿಯ ಸುದ್ದಿ ಮತ್ತೆ ವೈರಲ್ ಆಗಿತ್ತು.
Discussion about this post