ಪುತ್ತೂರು : ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದರು ಅನ್ನುವ ಕಾರಣಕ್ಕಾಗಿ ಯುವಕನೊಬ್ಬ ಹುಡುಗಿಯ ತಂದೆಯ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯ ಲಾಯಿಲದ ಹಳೇಪೇಟೆಯಲ್ಲಿ ನಡೆದಿದೆ.
ಹಳೇಪೇಟೆ ವಿವೇಕಾನಂದ ನಗರದ ನಿವಾಸಿ ಸೋಮನಾಥ ಕುಲಾಲ್ ಅವರ ಮನೆಗೆ ಜುಲೈ 11 ರಂದು ನುಗ್ಗಿದ ಕಡಬ ತಾಲೂಕು ಕೈಕಂಬ ನಿವಾಸಿ ದಿನೇಶ್, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀನ ಬೆದರಿಕೆಯೊಡ್ಡಿದ್ದಾನೆ. ಮಾತ್ರವಲ್ಲದೆ ಬ್ಯಾಗಿನಲ್ಲಿಟ್ಟು ತಂದಿದ್ದ ಮಂಡೆಕತ್ತಿಯನ್ನು ತೆಗೆದು ಸೋಮನಾಥ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ಈ ವೇಳೆ ಗಲಾಟೆ ಶಬ್ಧ ಕೇಳಿದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ದೌಡಾಯಿಸಿ ದಿನೇಶನ್ನು ತಡೆದಿದ್ದಾರೆ. ಜನ ಸೇರುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಈ ಸಂಬಂಧ ಸೋಮನಾಥ ಕುಲಾಲ್ ಅವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Discussion about this post