ಉಡುಪಿ : ಕರಾವಳಿ ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಕೆಡಿಸುವ ಅಕ್ರಮ ಜಾನುವಾರು ಸಾಗಾಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಜಾನುವಾರು ಹತ್ಯೆ ಕಾಯ್ದೆ ಜಾರಿಯಾದರೂ ದನಗಳ್ಳರಿಗೆ ಇದರ ಭಯವಿಲ್ಲದಂತಾಗಿದೆ.
ಸಾಲಿಗ್ರಾಮ ಕಡೆಯಿಂದ ಮಂಗಳೂರು ಕಡೆಗೆ ಬೊಲೇರೋ ಪಿಕ್ ಅಪ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಖದೀಮರ ತಂಡದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಕೋಟ ಪಿಎಸ್ ಐ ಸಂತೋಷ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಈ ವೇಳೆ ಒಬ್ಬ ಆರೋಪಿ ಸಿಕ್ಕಿ ಬಿದ್ದಿದ್ದು, ಮತ್ತಿಬ್ಬರು ಪರಾರಿಯಿದ್ದಾರೆ. ಅನುಮಾನದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಜಂಕ್ಷನ್ ಬಳಿ ಗೂಡ್ಸ್ ವಾಹನ ನಿಲ್ಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಪಿಕ್ ಅಪ್ ವಾಹನದಲ್ಲಿ ಒಂದು ದನ, ಎರಡು ಗಂಡು ಕರು, ಹಾಗೂ ಎರಡು ಕೋಣವನ್ನು ಹಿಂಸಾತ್ಮಕ ರೀತಿಯಲ್ಲಿ ಕತ್ತಿಗೆಗೆ ನೈಲಾನ್ ರೋಪ್ ಹಗ್ಗವನ್ನು ಕಟ್ಟಿ ಅವುಗಳಿಗೆ ಆಹಾರ ಮೇವು ನೀರು ನೀಡದೆ ಮಾಂಸಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ಗೊತ್ತಾಗಿದೆ.
ಇದೀಗ ಜಾನುವಾರು ದಲ್ಲಾಳಿ ಕಾವಡಿ ಸತೀಶ್ ಪೂಜಾರಿಯನ್ನು ಪೊಲೀಸರು ಬಂಧಿಸಲಾಗಿದ್ದು ಪರಾರಿಯಾದ ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ.
Discussion about this post