ಬೆಂಗಳೂರು : ಏಪ್ರಿಲ್ 1 ರಂದು ಮಧ್ಯಾಹ್ನ 1 ಗಂಟೆಗೆ ರವಿಕೆ ಖರೀದಿಸಲು ಕಮರ್ಷಿಯಲ್ ಸ್ಟ್ರೀಟ್ ಗೆ ಹೋಗಿದ್ದ ವಿಧಾನ ಪರಿಷತ್ ಸದಸ್ಯೆಯ ಪರ್ಸ್ ಕಳ್ಳತನವಾಗಿತ್ತು.
ಮಧ್ಯಾಹ್ನ ಶಾಪಿಂಗ್ ಹೋದವರಿಗೆ 3.45 ರ ಸುಮಾರಿಗೆ ಪರ್ಸ್ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅಂಗಡಿಗೆ ಹಿಂತಿರುಗಿ ಟೇಬಲ್ ಮೇಲೆ ನೋಡಿದಾಗ ಪರ್ಸ್ ಇರಲಿಲ್ಲ. ಅಂಗಡಿಯ ಸಿಬ್ಬಂದಿಯನ್ನು ಕೇಳಿದರೆ ಸಾಕಷ್ಟು ಗ್ರಾಹಕರು ಅಂಗಡಿಗೆ ಬರುತ್ತಾರೆ ಎಂದು ಉತ್ತರಿಸಿದ್ದಾರೆ.
ತಕ್ಷಣ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೌಡಾಯಿಸಿದ ಭಾರತಿ ಶೆಟ್ಟಿ ಈ ಸಂಬಂಧ ದೂರು ದಾಖಲಿಸಿದ್ದರು, ಪರ್ಸ್ ನಲ್ಲಿ 25 ಸಾವಿರ ನಗದು, ಎಸ್.ಬಿ.ಐ, ಕೆನರಾ ಬ್ಯಾಂಕ್ ಎಟಿಎಂ ಕಾರ್ಡ್. ಪಾನ್ ಕಾರ್ಡ್, ಎಂಎಲ್ಸಿ ಐಡಿ ಕಾರ್ಡ್ ಗಳಿತ್ತು.
ಬಳಿಕ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಅಂಗಡಿಗೆ ಹೋಗಿ ಮತ್ತೆ ವಿಚಾರಿಸಿದ್ದಾರೆ, ಆಗ್ಲೂ ಉತ್ತರ ಬಂದಿರಲಿಲ್ಲ. ಇದಾದ ಬಳಿಕ ಸಿಸಿಟಿವಿ ದೃಶ್ಯಗಳನ್ನು ತಿರುವು ಹಾಕಿದ ಪೊಲೀಸರು ಕಳ್ಳಿಯನ್ನು ಹಿಡಿದಿದ್ದಾರೆ.
ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಪರ್ಸ್ ಎಗರಿಸಿರುವುದು ಗೊತ್ತಾಗಿದೆ. ಅವರ ಬಳಿಯಿಂದ 21 ಸಾವಿರ ಕ್ಯಾಶ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Discussion about this post