ಕೆಪಿಸಿಸಿಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಂದುಗೌಡ ವಿರುದ್ಧ IT act 2008ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಿತ್ರವನ್ನು ಮಹಿಳೆಗೆ ಹೋಲಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಈ ಹಿನ್ನಲೆಯಲ್ಲಿ ಈ ದೂರು ದಾಖಲಾಗಿದೆ.
ಚಿಕ್ಕಬಳ್ಳಾಪುರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಸಚಿವರ ಗೌರವ ಘನತೆಗೆ ಕುಂದು ಉಂಟು ಮಾಡಿದ್ದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಅನ್ನುವವರು ದೂರು ನೀಡಿದ್ದಾರೆ.
ಕೊರೋನಾ ಕಾರಣದಿಂದ ಥಿಯೇಟರ್ ಗಳಿಗೆ ಹೇರಿದ್ದ ನಿಯಮಾವಳಿಯ ಕಾರಣಕ್ಕೆ ಬಿಂದುಗೌಡ ಈ ಪೋಸ್ಟ್ ಮಾಡಿದ್ದರು.
ಎಫ್ಐಆರ್ ದಾಖಲಾಗಿರುವ ಹಿನ್ನಲೆಯಲ್ಲಿ ಇದು ಒಂದು ಕೇಸ್ ಎಂದು ಬಿಂದುಗೌಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Discussion about this post