ಚೆನ್ನೈ : ಪಠ್ಯ ಪುಸ್ತಕಗಳಲ್ಲಿ ಗುರು ಹಿರಿಯರಿಗೆ ಗೌರವ, ದೇಶಭಕ್ತಿಯ ವಿಚಾರಗಳು ಹೆಚ್ಚು ಇರಬೇಕು ಅನ್ನುವುದು ಬಹುತೇಕ ಆಶಯ. ಆದರೆ ರಾಜಕೀಯ ಮರ್ಜಿಗೆ ಸಿಲುಕಿರುವ ಕೆಲ ತಜ್ಞರು ಪಠ್ಯ ಪುಸ್ತಕಗಳನ್ನು ತಿದ್ದುವ ನೆಪದಲ್ಲಿ ಭಾರತೀಯರಿಗೆ ಸಂಬಂಧವಿಲ್ಲದ ವಿಷಯಗಳನ್ನು ತುರುಕುತ್ತಾರೆ. ಮಹಾಭಾರತ, ರಾಮಾಯಣದ ಬದಲು ವಿದೇಶ ಕ್ರೂರಿ ರಾಜರ ಪಾಠಗಳನ್ನು ಸೇರಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳ ಮನಸ್ಸಿನ ಅದ್ಯಾವ ಪರಿಣಾಮ ಬೀರಬಹುದು.
ಈ ನಡುವೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಅಂಧ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿಗಳೇ ಅವಮಾನ ಮಾಡಿದ ಘಟನೆ ನಡೆದಿದೆ. ಕಣ್ಣು ಕಾಣದ ಅವರು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪಾಠ ಮಾಡುತ್ತಿದ್ರೆ ವಿದ್ಯಾರ್ಥಿಗಳು ಅವರ ಮುಂದೆ ಅಸಹ್ಯವಾಗಿ ನಡೆದುಕೊಂಡಿದ್ದಾರೆ. ರಾಸಿಪುರಂ ತಾಲೂಕಿನ ಪುದುಚೆಟ್ಟಿರಾಂ ಎಂಬ ಊರಿನ ಸರ್ಕಾರಿ ಶಾಲೆಯ ಹತ್ತನೇ ತರಗತಿಯಲ್ಲಿ ಈ ಘಟನೆ ನಡೆದಿದೆ.
ತರಗತಿಯಲ್ಲಿ ಸಮಾಜ ಶಾಸ್ತ್ರ ಪಾಠ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗಳು ಅಂಧ ಶಿಕ್ಷಕರ ಎದುರು ನೃತ್ಯ ಮಾಡಿ ಕುಚೇಷ್ಟೆ ಮೆರೆದಿದ್ದಾರೆ. ಕೆಲ ವಿದ್ಯಾರ್ಥಿಗಳು ಇದನ್ನು ವಿಡಿಯೊ ಮಾಡಿ ಫೇಸ್ಬುಕ್ ಗೆ ಹಾಕಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ. ಈ ವೇಳೆ ನಾಮಕ್ಕಲ್ ಜಿಲ್ಲೆಯ ಶಾಲೆಯಲ್ಲಿ ಘಟನೆ ನಡೆದಿರುವುದು ಗೊತ್ತಾಗಿದೆ. ಇದೀಗ ಶಾಲಾಡಳಿತ ಮಂಡಳಿ ಘಟನೆಯಲ್ಲಿ ಭಾಗಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದು, ಪೋಷಕರಿಗೆ ನೋಟಿಸ್ ನೀಡಿದೆ.
Three Class IX students of Puduchattiram Government Higher Secondary School near Rasipuram in Tamil Nadu’s Namakkal district have been dismissed after they ridiculed a visually impaired teacher while he was taking class on Friday.
Discussion about this post