ಮುಂಬೈ : ಮಕ್ಕಳಿರುವ ಪೋಷಕರು ಹಾಗೂ ಮನೆಯಲ್ಲಿ ಮಕ್ಕಳನ್ನು ಹೊಂದಿರುವ ಯಾರೇ ಆದರೂ ಕೂಡಾ ಈ ಸುದ್ದಿಯನ್ನು ಓದಲೇಬೇಕು. ಮಕ್ಕಳಿರುವ ಮನೆಯನ್ನು ಸಾವಿರ ಕಣ್ಣುಗಳಿಂದ ನೋಡಿದರೂ ಸಾಕಾಗುವುದಿಲ್ಲ ಎಂದು ಸುಮ್ಮನೇ ಹೇಳಿಲ್ಲ.
18 ವರ್ಷದ ಹುಡುಗಿಯೊಬ್ಬಳು ಟೂತ್ ಪೇಸ್ಟ್ ಎಂದು ಭಾವಿಸಿ ಇಲಿ ವಿಷದಿಂದ ಹಲ್ಲುಜ್ಜಿ ಮೃತಪಟ್ಟಿರುವ ದಾರುಣ ಘಟನೆ ಮುಂಬೈನ ಧಾರಾವಿಯಲ್ಲಿ ನಡೆದಿದೆ.
ಧಾರಾವಿಯ ಅಪ್ಸಾನ ಎಂದಿನಂತೆ ಹಲ್ಲುಜ್ಜುವ ಸಂದರ್ಭದಲ್ಲಿ ರುಚಿ ಮತ್ತು ವಾಸನೆಯಲ್ಲಿ ವ್ಯತ್ಯಾಸ ಗ್ರಹಿಸಿದ್ದಾಳೆ. ಕೆಲವೇ ಹೊತ್ತಿನಲ್ಲಿ ಆಕೆಗೆ ತಲೆ ತಿರುಗುವ ಅನುಭವವಾಗಿದೆ. ಹೀಗಾಗುತ್ತಿದೆ ಎಂದು ಹೇಳಿದರೆ ಮನೆಯವರು ಬೈಯುತ್ತಾರೆ ಅನ್ನುವ ಕಾರಣದಿಂದ ಹೊಟ್ಟೆ ನೋವಿನ ಜೌಷಧಿ ಸೇವಿಸಿದ್ದಾಳೆ. ಆದರೆ ಬಳಿಕ ಅಪ್ಸಾನ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಹೀಗಾಗಿ ಪೋಷಕರು ಮಗಳನ್ನು ಮೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆರೋಗ್ಯದ ಸ್ಥಿತಿ ತೀರಾ ಹದಗೆಡುತ್ತಿದ್ದಂತೆ ಅಪ್ಸಾನ ನಡೆದ ವಿಷಯವೇನು ಅನ್ನುವುದನ್ನು ತಾಯಿಗೆ ಹೇಳಿದ್ದಾಳೆ. ಬಳಿಕ ಮುಂಬೈನ ಸರ್ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟು ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅಪ್ಸಾನ ಸಪ್ಟಂಬರ್ 12 ರಂದು ಮೃತಪಟ್ಟಿದ್ದಾಳೆ.
Discussion about this post